ಪಾವಗಡ :ಕಾಂಗ್ರೆಸ್ ಸರ್ಕಾರ ಬಡವರ ಸರ್ಕಾರವಾಗಿದ್ದು, ಸಿದ್ದರಾಮಯ್ಯ ಕಳಂಕಿತ ರಹಿತ ವ್ಯಕ್ತಿಯಾಗಿದ್ದು ಹೇಗಾದರೂ ಮಾಡಿ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ ಜೆಡಿಎಸ್ ಹಂಬಲಿಸುತ್ತಿದೆ ಎಂದು ಶಾಸಕ ಹೆಚ್ ವಿ ವೆಂಕಟೇಶ್ ತಿಳಿಸಿರು.
ಸೋಮವಾರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಶಾಸಕ ಹೆಚ್ ವಿ ವೆಂಕಟೇಶ್ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಕೇಂದ್ರ ಬಿಜೆಪಿ ಸರ್ಕಾರ ಮತ್ತು ಅದರ ಮೈತ್ರಿ ಪಕ್ಷವಾದ ಜೆಡಿಎಸ್ ನವರ ಕೈಗೊಂಬೆಯಂತೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.ಪ್ರತಿಭಟನೆ ಉದ್ದೇಶಿಸಿ ಮಾಜಿ ಶಾಸಕ ವೆಂಕಟರಮಣಪ್ಪ ಮಾತನಾಡಿ,ಬಿಜೆಪಿ ಸರ್ಕಾರ ಜನಮನ್ನಣೆ ಇಲ್ಲದಿದ್ದರೂ ಹಿಂಭಾಗಿಲಿನಿಂದ ಅಧಿಕಾರಕ್ಕೆ ಬರಲು ಯಾವಾಗಲೂ ಪ್ರಯತ್ನಿಸುತ್ತಿರುತ್ತದೆ ಎಂದು ವಿನಾಕಾರಣ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಟ್ರಾಸಿಕ್ಯೂಷನ್ ಗೆ ಆದೇಶಿಸಿರುವ ರಾಜ್ಯಪಾಲರ ನಡೆ ಖಂಡನೀಯವೆಂದರು.
ಪಟ್ಟಣದ ಶನಿಮಹಾತ್ಮ ಸರ್ಕಲ್ ನಿಂದ ಪ್ರಾರಂಭವಾದ ಪ್ರತಿಭಟನೆ ಜಾಥಾ ಬಳ್ಳಾರಿ ರಸ್ತೆಯ ಅಂಬೇಡ್ಕರ್ ಸರ್ಕಲ್ ನವರೆಗೆ ನಡೆಯಿತು.
ಅಂಬೇಡ್ಕರ್ ಸರ್ಕಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ಪ್ರಕೃತಿದ ಹಣ ಮಾಡಿ ದರು.ತಹಶೀಲ್ದಾರ್ ಕಚೇರಿಗೆ ಭೇಟಿ ಮಾಡಿ ವರದರಾಜುರವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು,ರಾಮಾಂಜಿನಪ್ಪ , ಕೆಪಿಸಿಸಿ ಸದಸ್ಯ ಕೆ ಎಸ್ ಪಾಪಣ್ಣ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ಪುರಸಭಾ ಸದಸ್ಯರಾದ ರಾಜೇಶ್, ರವಿ, ಲಿಂಗಮಯ್ಯ, ಶಾ ಬಾಬು, ಜೈ ಕುಮಾರ್ ನಾಯ್ಕ, ಗೋಪಾಲ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ :ಕೆ.ಮಾರುತಿ ಮುರಳಿ