ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಹೋಬಳಿಯಲ್ಲಿ ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸಿದ ಮಹಾಪುರುಷ ಸಾಮಾಜಿಕ ಧಾರ್ಮಿಕ ಶಿಕ್ಷಣ ಪರಿವರ್ತನೆಯ ಹರಿಕಾರರಾದ ಮಹಾ ಚಿಂತಕ ಶ್ರೀ ನಾರಾಯಣಗುರು ರವರ 170 ನೇಜಯಂತಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಈಡಿಗ ಸಂಘದ ತಾಲೂಕ ಅಧ್ಯಕ್ಷರಾದ ರಾಜು ಈಳಗೇರ ಮಾತನಾಡಿ ಒಂದೇ ಜಾತಿ ಒಂದೇ ಮತ ಎಂಬ ನಾಣ್ಣುಡಿಯಿಂದ ಅಸ್ಪೃಶ್ಯತೆ ಅಳಿಸಲು ಹೋರಾಡಿದವರು ನಮ್ಮ ನಾರಾಯಣ ಗುರುಗಳು ಎಂದರು.ಭೋವಿ ಸಂಘದ ಮುಖಂಡರಾದ ಹನಮಂತ ವಡ್ಡರ ಮಾತಾಡಿದರು ಈಡಿಗ ಸಮಾಜದ ಮುಖಂಡರಾದ ಮಡು ಇಳಗೇರ್ ಪರಶು ಇಳಗೇರ್ ಶಾಂತು ಇಳಗೇರ್ ದೇವಿಂದ್ರಪ್ಪ ಗೋಗಿ ಸುರೇಶ ಇಳಗೇರ್ ಊರಿನ ಮುಖಂಡರಾದ ಲಕ್ಕಪ್ಪ ಬಡಿಗೇರ ಮಲ್ಲು ಜಂಬಗಿ ಶರಣು ಜಲಕಿ ಅಲ್ಲಾಬಕ್ಷ ಹೊಸಮನಿ ಇತರರು ಹಾಜರಿದ್ದರು.
ವರದಿ ಪರಶುರಾಮ ಈಳಗೇರ