ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಲ್ಲಬಾದ್ ಏತ ನೀರಾವರಿ ಯೋಜನೆಯ ಕಾಮಗಾರಿಯು ಆಮೆಗತಿಯಲ್ಲಿ ತೆವಳುತ್ತಾ ಸಾಗುತ್ತಿದೆ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಅಧಿಕಾರದ ಅವಧಿಯಲ್ಲಿ ಮುಗಿಯಬೇಕಾಗಿದ್ದ! ಮಲ್ಲಾಬಾದ ಏತ ನೀರಾವರಿ ಕಾಮಗಾರಿಯ ಯೋಜನೆಯು 30 ವರ್ಷಗಳಾದರೂ ಯಾವ ಕಾರಣಕ್ಕೋಸ್ಕರ ಈ ಕಾಮಗಾರಿ ಮುಕ್ತಾಯವಾಗಿಲ್ಲ ತಾಲೂಕಿನ ಮತ ನೀಡಿದ ಮತದಾರ ರೈತರಿಗೆ ಋಣಮುಕ್ತರನ್ನಾಗಿಸಿ ಈ ಕಾಮಗಾರಿಯನ್ನು ಕೂಡಲೆ ಮುಕ್ತಾಯಗೊಳಿಸಬೇಕು ರೈತರ ಸಬಲೀಕರಣಕ್ಕೆ ತಾಲೂಕಿನ ಶಾಸಕರು ಶ್ರಮಿಸಬೇಕು ಅದೇ ರೀತಿಯಾಗಿ ತಾಲೂಕಿನಲ್ಲಿ ಮಲ್ಲಬಾದ್ ಏತ ನೀರಾವರಿ ಯೋಜನೆಯ ಜಾರಿಗಾಗಿ ಹಲವಾರು ರೈತರು ಹಾಗೂ ರೈತ ಪರ ಸಂಘಟನೆಯವರು ಹಾಗೂ ಮಠಾಧೀಶರು ಹೋರಾಟ ಮಾಡುತ್ತಲೇ ಬಂದಿದ್ದಾರೆ ಅದೇ ರೀತಿಯಾಗಿ ಪ್ರಸ್ತುತ ಈಗಿನ ಶಾಸಕರು ಹಾಗು ಮಾಜಿ ಮುಖ್ಯಮಂತ್ರಿ ಪುತ್ರರಾದ (ಕೆಕೆಆರ್‌ಡಿಬಿ) ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಅವರು ತಾಲೂಕಿನಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.ಆದರೆ ಭರವಸೆ ಮಾತ್ರ ಕೊಡುತ್ತಾರೆ ವಿನಃ ಈ ಮಲ್ಲಾಬಾದ ಏತ ನೀರಾವರಿಯ ಕಾಮಗಾರಿ ಮುಗಿಯುವ ಯಾವ ಲಕ್ಷಣಗಳು ಕಾಣುತಿಲ್ಲ ತಾಲೂಕಿನ ಶಾಸಕರು ಭರವಸೆ ನೀಡಿದರೆ ಮಾತ್ರ ಸಾಲದು ಕೂಡಲೇ ಕಾರ್ಯರೂಪಕ್ಕೆ ತಂದು ಮಲ್ಲಬಾದ್ ಏತ ನೀರಾವರಿಯ ಯೋಜನೆಯನ್ನು ಪೂರ್ಣಗೊಳಿಸಬೇಕು ಒಂದು ವೇಳೆ ಹೀಗೆ ಭರವಸೆ ನೀಡುತ್ತ ಸಾಗಿದರೆ ಪ್ರತಿ ಹಳ್ಳಿಯಲ್ಲೂ ಮಲ್ಲಾಬಾದ್ ಏತ ನೀರಾವರಿಯ ಕುರಿತು ರೈತರಲ್ಲಿ ಜಾಗೃತಿ ಜಾತ ಮೂಡಿಸಿ ತಾಲೂಕಿನ ರೈತರೊಂದಿಗೆ ಶಾಸಕರ ಭವನಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದೆಂದು ನಮ್ಮ ಕರ್ನಾಟಕ ಸೇನೆ ಕಟ್ಟಡ ಕಾರ್ಮಿಕ ಬೆಂಗಳೂರು ಘಟಕ ಅಧ್ಯಕ್ಷರಾದ ಚಂದ್ರಕಾಂತ್ ಕೋಳಕುರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
