ಕೊಪ್ಪಳ:ತಾಲೂಕಿನ ಹಳೆ ಗೊಂಡುಬಾಳ ಅಂಗನವಾಡಿ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ ಮಾಡುವ ಮೂಲಕ ಅಂಗನವಾಡಿ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಪಲ್ಲವಿ ಪೊಲೀಸ್ ಪಾಟೀಲ್ ಇವರು ಮಕ್ಕಳಿಗೆ ರಕ್ಷಾ ಬಂಧನ, ರಕ್ಷಾ ಬಂಧನ ಮತ್ತು ತಾಯಿಗೆ ಒಂದು ಮರ ಎಂಬ ಆಚರಣೆ ಮಾಡುವ ಮೂಲಕ ಮಕ್ಕಳಲ್ಲಿ ಪರಿಸರ ಮತ್ತು ಅಣ್ಣ ತಂಗಿಯ ಬಂದತ್ವ ಅರಿವನ್ನು ಮಕ್ಕಳಿಗೆ ಮೂಡಿಸಿದರು. ರಕ್ಷ ಅಣ್ಣ ತಂಗಿಯ ಬಾಂಧವ್ಯವನ್ನು ಮೂಡಿಸಿ ಸೋದರತ್ವದ ಅಣ್ಣನ ಮಡಿಲಿನ ಬಂದು ಹೇಳುತ್ತದೆ, ವೃಕ್ಷ ಬಂಧನ, ಪ್ರತಿಯೊಂದು ಮಗು ಒಂದು ಮರ ಬೆಳೆಸುವ ಮೂರು ಮೂಲಕ ಪರಿಸರದ ಬಗ್ಗೆ ಪ್ರಜ್ಞೆ ಮತ್ತು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು, ಹಾಗೂ ತಾಯಿಗೊಂದು ಮರ, ಇದು ದೇಶದ ಪ್ರಧಾನಿಯಾದ ಶ್ರೀ ನರೇಂದ್ರ ಮೋದಿಯವರು ವಿಶ್ವದ ಪರಿಸರ ದಿನಾಚರಣೆ ಅಂಗವಾಗಿ ಬುದ್ಧನ ಜಯಂತಿ ಆಚರಣೆ ಮಾಡುವ ಮೂಲಕ ಅಶ್ವತ್ ಎಂಬ ಸಸಿಯನ್ನು ತಮ್ಮ ತಾಯಿಯ ಹೆಸರಲ್ಲಿ ಸಸಿಯನ್ನು ನೆಟ್ಟರು. ಭೂಮಿ ತಾಯಿಯ ಪ್ರಕೃತಿ ಪೋಷಣೆ, ನಮ್ಮ ತಾಯಂದಿರ ಮಾನವನ ಜೀವನದ ಪೋಷಣೆ ಸಮನಂತರವಾಗಿರುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಶಿಕ್ಷಕಿ ಸಹಾಯಕಿಯರು ಪೋಷಕರು ಭಾಗಿಯಾಗಿದ್ದರು.
