ಕಲಬುರಗಿ:ಕರ್ನಾಟಕ ಗಜಲ್ ಅಕಾಡೆಮಿ (ರಿ.) ಬೆಂಗಳೂರು ವತಿಯಿಂದ ದಿನಾಂಕ :೨೫.೦೮.೨೦೨೪ ರಂದು ಕಲಬುರಗಿ ನಗರದ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದ ಶಾಂತರಸ ವೇದಿಕೆಯಲ್ಲಿ ಜರುಗಿದ ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದಲ್ಲಿ ಜರುಗಿದ ೩ ರ “ಗಜಲ್” ಗೋಷ್ಠಿಯಲ್ಲಿ ಗಜಲ್ಕಾರ ಹಾಗೂ ಕವಿಗಳಾದ ಡಾ. ಶಿವಕುಮಾರ. ಲಾ. ಸೂರ್ಯವಂಶ, ಕಲಬುರಗಿ ರವರು ತಮ್ಮ “ಗಜಲ್” ವಾಚನ ಮಾಡಿದರು. ಗಜಲ್ ವಾಚನ ಗೋಷ್ಠಿ ೩ ಅನ್ನು ಶ್ರೀ ಸಿದ್ದರಾಮ ಹೊನ್ಕಲ್, ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಚಾಲನೆ ನೀಡಿದರು. ಡಾ. ಜಯದೇವಿ ಗಾಯಕವಾಡ್, ಸಲಹಾ ಸಮಿತಿ ಸದಸ್ಯರು, ಕೇಂದ್ರ ಸಾಹಿತ್ಯ ಅಕಾಡೆಮಿ, ಇವರು ಅಧ್ಯಕ್ಷತೆ ವಹಿಸಿದರು.
ಗಜಲ್ ವಾಚನ ಮಾಡಿರುವ ಡಾ. ಶಿಲಾಸೂ ರವರನ್ನು ಮುಖ್ಯ ವೇದಿಕೆಯಲ್ಲಿ ಪುಸ್ತಕಗಳನ್ನು ಅಭಿನಂದಿಸಲಾಯಿತು.
ಶ್ರೀ ಸಿದ್ದರಾಮ ಹೊನ್ಕಲ್, ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಡಾ. ಜಯದೇವಿ ಗಾಯಕವಾಡ್ ಸಲಹಾ ಸಮಿತಿ ಸದಸ್ಯರು, ಕೇಂದ್ರ ಸಾಹಿತ್ಯ ಅಕಾಡೆಮಿ, ಶ್ರೀ, ರಂಗಸ್ವಾಮಿ ಸಿದ್ದಯ್ಯ, ಅಧ್ಯಕ್ಷರು, ಕರ್ನಾಟಕ ಗಜಲ್ ಅಕಾಡೆಮಿ, ಬೆಂಗಳೂರು, ಶ್ರೀ ಮಹಿಪಾಲರೆಡ್ಡಿ ಮುನ್ನೂರ್, ಕಾರ್ಯದರ್ಶಿ, ಕರ್ನಾಟಕ ಗಜಲ್ ಅಕಾಡೆಮಿ, ಬೆಂಗಳೂರು ಹಾಗೂ ಶ್ರೀ ಅಬ್ದುಲ್ ಹೈ ತೋರಣಗಲ್ಲು, ಸಮ್ಮೇಳನದ ಸಂಚಾಲಕರು ಮತ್ತಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲಬುರಗಿಯಲ್ಲಿ ಜರುಗಿದ ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನ ಐತಿಹಾಸಿಕ ದಾಖಲೆಯಾಗಿದೆ ಎಂದು ಸಮ್ಮೇಳನಾಧ್ಯಕ್ಷರಾದ ಶ್ರೀಮತಿ, ಪ್ರಭಾವತಿ. ಎಸ್. ದೇಸಾಯಿ, ಹಿರಿಯ ಗಜಲ್ಕಾರರು, ವಿಜಯಪುರ, ರವರು ಹರ್ಷ ವ್ಯಕ್ತಪಡಿಸಿದರು.