ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಆಡಳಿತ ಸಮಿತಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಜಯಂತಿಯನ್ನು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಆಚರಣೆ ಮಾಡಿದರು.
ಶ್ರೀ ಕೃಷ್ಣರ ಭಾವಚಿತ್ರಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಪುಷ್ಪಾರ್ಷನೆ ಸಲ್ಲಿಸಿ ಸ್ಮರಿಸಿ ಬಳಿಕ ಅವರು ಮಾತನಾಡಿ ಶ್ರೀ ಕೃಷ್ಣ ಜನ್ಮಾಷ್ಠಮಿ ಜಯಂತಿಯು ಒಂದು ಸಮಾಜಕ್ಕೆ ಸೀಮಿತವಾದ ಆಚರಣೆ ಅಲ್ಲ ಎಂದರಲ್ಲದೆ ಎಲ್ಲಾ ಸಮಾಜಕ್ಕೂ ಅನ್ವಯವಾಗಿದೆ ಮಹನೀಯರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು.
ಗೋವಿನ ಪ್ರೀತಿ, ಹಾರೈಕೆ ಮಾಡುತ್ತಾ ಜೊತೆಗೆ ಶ್ರೀ ಕೃಷ್ಣ ಆರಾಧ್ಯ ದೈವವಾಗಿ ಸಮುದಾಯ ಜನರು ಪೂಜಿಸುತ್ತಾ ಬರಲಾಗುತ್ತಿದೆ ಎಲ್ಲಿದ್ದರೂ ಅನ್ಯಾಯವಾದಾಗ ಯಾವುದಾದರೂ ಒಂದು ರೂಪದಲ್ಲಿ ಶ್ರೀ ಕೃಷ್ಣ ರಕ್ಷಣೆ ಕೊಡುತ್ತಾನೆ ಎಂಬ ನಂಬಿಕೆ ಜನರಲ್ಲಿದೆ ಹೀಗಾಗಿ ನಂಬಿಕೆಗೆ ಗೌರವಿಸಬೇಕು ಮುಂದಿನ ದಿನಗಳಲ್ಲಿ ವಿಭೃಂಜಣೆಯಿಂದ ಜಯಂತಿ ಆಚರಣೆ ಮಾಡಲು ಚಿಂತನೆ ಇದೆ ಎಂದು ಭರವಸೆ ನೀಡಿದರಲ್ಲದೆ ಎಲ್ಲಾ ಸಮುದಾಯ ಜನರು ಭವನ ಜಾಗಕ್ಕಾಗಿ ಬೇಡಿಕೆ ಇದೆ ಇದನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ನಂತರ ತಾಲೂಕಿನ ಗುಂಡಾಪುರ, ಕೆಂಪಯ್ಯನಟ್ಟಿ, , ದೊಡ್ಡಲತ್ತೂರು ಪುದುನಗರ,ಮಲ್ಲಯ್ಯನ ಪುರ,ಕೆಂಚಯ್ಯನ ದೊಡ್ಡಿ,ಹಾಗೂ ಇನ್ನಿತರ ಗ್ರಾಮೀಣ ಭಾಗಗಳಿಗೆ ತೆರಳಿ ಮುಖಂಡರುಗಳಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭೇಟಿ ನೀಡಿ ಶುಭಾಶಯ ಕೋರಿ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಗುರುಪ್ರಸಾದ್ ಇಒ ಉಮೇಶ್, ದೈಹಿಕ ಪರಿವೀಕ್ಷಕ ಮಹದೇವ್, ಯಾದವ ಸಮಾಜದ ಮುಖಂಡರಾದ ಎಸಿಪಿ ಮಹಾದೇವ, ಸುರೇಶ್, ಚಿನ್ನಪ್ಪಯ್ಯ, ಮಹೇಶ್, ನಾರಾಯಣ, ಮುತ್ತುರಾಜು, ನಾಗರಾಜು, ವಿಜಯ ಕುಮಾರ್ ಸೇರಿದಂತೆ ಹನೂರು ತಾಲೂಕು ಆಡಳಿತ ಸಿಬ್ಬಂದಿಗಳು ಮತ್ತಿತರರು ಇದ್ದರು.
ವರದಿ ಉಸ್ಮಾನ್ ಖಾನ್