ಪಾವಗಡ:ಶಾಸಕ. ಹೆಚ್.ವಿ.ವೆಂಕಟೇಶ್ ಮತ್ತು ಮಾಜಿ ಸಚಿವ ವೆಂಕಟರಮಣಪ್ಪ ಅವರಿಗೆ ಸೋಮವಾರ ವಾಲ್ಮೀಕಿ ಜಾಗೃತಿ ವೇದಿಕೆಯ ಗಣ್ಯರು ಆಹ್ವಾನ ಪತ್ರಿಕೆ ವಿತರಿಸಿದರು. ಪ್ರತಿ ವರ್ಷ ನಿಡಿಗಲ್ಲು ಉತ್ಸವವನ್ನು ಆಯೋಜಿಸಲು ಸರಕಾರ ಶ್ರಮಿಸುವಂತೆ ತಿಳಿಸಿದರು. ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸುವುದಾಗಿ ಶಾಸಕ ವೆಂಕಟೇಶ್ ಭರವಸೆ ನೀಡಿದರು. ಪಾಳೇಗಾರ್ ಲೋಕೇಶ್,ಚಿತ್ತಗಾನಹಳ್ಳಿ ಚಂದ್ರು, ಮುಗದಲಬೆಟ್ಟ ಭಾಸ್ಕರ್ ನಾಯ್ಕ, ಕೆ.ರಾಂಪುರ ನಾಗೇಶ್ ಮತ್ತಿತರರು ಭಾಗವಹಿಸಿದ್ದರು.
ವರದಿ:ಕೆ.ಮಾರುತಿ ಮುರಳಿ