ವಿಜಯಪುರ:ಸ್ಟಾಫ್ ನರ್ಸ್ ಆತ್ಮಹತ್ಯೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ಕೊಡಿ ಎಂದು ಕರ್ನಾಟಕ ರಾಜ್ಯ ಛಲವಾದಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಚಿದಾನಂದ ಎಂ ಕಾಂಬಳೆ ಆಗ್ರಹ ವ್ಯಕ್ತಪಡಿಸಿದರು.
ದಿನಾಂಕ 26.08.2024 ರಂದು ವಿಜಯಪುರದಲ್ಲಿ
ಶಶಿಕಾಂತ ಬೆಣ್ಣೂರ ಸ್ಟಾಫ್ ನರ್ಸ್ ತಾಳಿಕೋಟಿ ಇವರು ಆತ್ಮಹತ್ಯೆ ಮಾಡಿಕೊಂಡಿರುವಾಗ ಡೆತ್ ನೋಟ್, ವಾಟ್ಸಪ್ ಸ್ಟೇಟಸ್ ನಲ್ಲಿ ಮೂವರು ಅಧಿಕಾರಿಗಳ ಹೆಸರು ಬರೆದು ಇವರ ಹಿಂಸೆ,ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಹೇಳಿರುವುದರಿಂದ ಮೂವರು ಅಧಿಕಾರಿಗಳ ವಿರುದ್ದ ಕೂಡಲೇ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ನೀಡುವಂತೆ ಮಾನ್ಯ ಜಿಲ್ಲಾಧಿಕಾರಿಗಳು ವಿಜಯಪುರ ಹಾಗೂ ಮಾನ್ಯ ಪೋಲೀಸ್ ವರಿಷ್ಠಾಧಿಕಾರಿಗಳು ವಿಜಯಪುರ ಇವರಿಗೆ ಮನವಿ ಕೊಡಲಾಯಿತು.
ಇದರ ನೇತೃತ್ವವನ್ನು ಕರ್ನಾಟಕ ರಾಜ್ಯ ಛಲವಾದಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಶ್ರೀ ಚಿದಾನಂದ ಎಮ್ ಕಾಂಬಳೆ ವಹಿಸಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಶ್ರೀ ರಾಕೇಶ ಇಂಗಳಗಿ,ರಾಜ್ಯ ಹಿರಿಯ ಉಪಾಧ್ಯಕ್ಷರು,
ಶ್ರೀ ಅರವಿಂದ ಲಂಬು, ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಶ್ರೀ ಹೆಚ್ ಬಿ ಸಿಂಗ್ಯಾಗೋಳ,
ರಾಜ್ಯ ಸಹ ಕಾರ್ಯದರ್ಶಿ ಶ್ರೀ ಡಿ ಎಮ್ ಚಲವಾದಿ,
ರಾಜ್ಯ ಸಂಚಾಲಕರು ಶ್ರೀ ಮೋಹನ ಬಿ ಗುನ್ನಾಪುರ
ರಾಜ್ಯ ಖಜಾಂಚಿ ಸುರೇಶ ಸಿ ದುಲಾರಿ
ಹಾಗೂ ಶ್ರೀ ಪರಶುರಾಮ ಗರಸಂಗಿ ಬಹುಜನ ಸಂಘ ಸಮಿತಿ ಕಾರ್ಯಾಧ್ಯಕ್ಷರು,
ಶ್ರೀ ಜಯಶ್ರೀ ಬ್ಯಾಕೋಡ ಅಧ್ಯಕ್ಷರು ಜಿಲ್ಲಾ ಬಹುಜನ ಮಹಿಳಾ ಘಟಕ,
ಶ್ರೀ ಶಿವರಣ ಕಾಂಬಳೆ ಜಿಲ್ಲಾ ಉಪಾಧ್ಯಕ್ಷರು
ಶ್ರೀ ಮುದ್ದಣ್ಣ ಭೀಮನಗರ ರಾಜ್ಯ ಉಪಾಧ್ಯಕ್ಷರು, ಭೀಮಶೇನ ರಾಜ್ಯ ಸಮಿತಿ,ಶ್ರೀ ಕೆ ಬಿ ಕೋರೆ ಅಧ್ಯಕ್ಷರು ವಾರ್ಡನ ಸಂಘ ವಿಜಯಪುರ ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ ಮನೋಜ್ ನಿಂಬಾಳ