ಶಿವಮೊಗ್ಗ: ನಮ್ಮ ಮನ ಶುದ್ಧವಾಗಿರುವಂತೆ ಪರಿಸರವನ್ನು ಶುದ್ಧವಾಗಿ ಕಾಪಾಡಿಕೊಂಡಾಗ ಸ್ವಸ್ಥ ಸಮಾಜವನ್ನು ರೂಪಿಸಲು ಸಾಧ್ಯ. ಪರಿಸರ ಶುದ್ಧವಾಗಿದ್ದಾಗ ಮಾತ್ರ ನಮ್ಮ ಬದುಕು ಹಸನಾಗಿರುತ್ತದೆ ಎಂದು ಶ್ರೀ ಜನಸ್ಪಂದನ ಟ್ರಸ್ಟ್ ಅಧ್ಯಕ್ಷರಾದ ಚನ್ನಬಸಪ್ಪ (ಚೆನ್ನಿ) ಹೇಳಿದರು.
ಅವರು ವಿಕಾಸ್ ಟ್ರಸ್ಟ್ ಮತ್ತು ಶ್ರೀ ಜನಸ್ಪಂದನ ಟ್ರಸ್ ವತಿಯಿಂದ ಕೃಷ್ಣ ಜನ್ಮಾಷ್ಮಮಿ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀಕೃಷ್ಣಾ ವೇಷಭೂಷಣ ಕಾರ್ಯಕ್ರಮ ಮತ್ತು ಶಿವಮೊಗ್ಗ ಬಾಲಗೋಕುಲದ ಮನೆಗೊಂದು ಗಿಡ, ಗಿಡಕ್ಕೊಂದು ರಕ್ಷೆ ಎಂಬ ಘೋಷವಾಕ್ಯದೊಂದಿಗೆ ಇಂದು ಬಿದರೆ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆ ಮತ್ತು ಹೊನ್ನವಿಲೆ ಸರ್ಕಾರಿ ಶಾಲೆ ಹಮ್ಮಿಕೊಂಡಿದ್ದ ಸಸಿ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾನವ ಕುಲವು ತನ್ನ ದುರಾಸೆಯಿಂದ ಸುತ್ತಮುತ್ತಲಿನ ಸಂಪನ್ಮೂಲಗಳನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡು, ನಮ್ಮ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎಂದರು.
ಎಲ್ಲಿಯವರೆಗೆ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಮತೋಲನ ಇರುವುದಿಲ್ಲವೋ ಅಲ್ಲಿಯವರೆಗೆ ಈ ವಿಶ್ವದಲ್ಲಿ ಮಾನವನ ಜೀವನ ಅತ್ಯಂತ ಕಷ್ಟಕರವಾಗುತ್ತದೆ. ಅಂತೆಯೇ ಪ್ರಕೃತಿ ಪ್ರಾಣಿ, ಪಕ್ಷಿ ಸಂಕುಲವನ್ನು ಹಾಗೂ ಅರಣ್ಯವನ್ನು ರಕ್ಷಿಸುವ ಹೊಣೆಗಾರಿಗೆ ನಮ್ಮದಾಗಿರುತ್ತದೆ ಎಂದು ಹೇಳಿದರು.
ಪರಿಸರ ರಕ್ಷಣೆಗಾಗಿ ಪ್ರತಿ ಮಗು ತನ್ನ ಮನೆ ಮುಂದೆ ಗಿಡ ನೆಟ್ಟು ರಕ್ಷೆ ಕಟ್ಟುವ ಮೂಲಕ ಪರಿಸರ ಸಂರಕ್ಷಣೆ ಸಂಕಲ್ಪ ಮಾಡಲಾಯಿತು.
ಸಸಿ ನಿರ್ವಾಹಣೆ ಬೇಕಾದ ವೆಚ್ಚವನ್ನು ಶ್ರೀ ಜನಸ್ಪಂದನ ಟ್ರಸ್ಟ್ ಭರಿಸಲಿದೆ ಎಂದರು. ಸಸಿಗಳನ್ನು ಮೂರು ವರ್ಷಗಳ ಕಾಲ ಸರಿಯಾಗಿ ನೋಡಿಕೊಂಡು ಕಾಪಾಡುವ ವಿದ್ಯಾರ್ಥಿ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಇಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡುವವರು ಮೊಬೈಲ್ ನಂ.೯೫೯೧೭೭೯೯೭೦ ಸಹಕರಿಸಬಹುದು.
ಸಂದರ್ಭದಲ್ಲಿ ಬಾಲಗೋಕುಲದ ಶಿವಮೊಗ್ಗ-ಹಾಸನ ವಿಭಾಗದ ವಿಶ್ವಸ್ಥರರಾದ ಪಾಂಡುರಂಗ ಪರಾಂಡೆ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ