ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ್ (ಬಿ) ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಂದೋಲಾ ವಲಯ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಜಯ ಸಾಧಿಸಿ ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಪ್ರೌಢಶಾಲೆಯ ಮುಖ್ಯ ಗುರುಗಳಾದ ದಯಾನಂದ್ ಬಿರಾದಾರ್ ಅವರು ಹರ್ಷ ವ್ಯಕ್ತಪಡಿಸಿ ಶುಭಕೋರಿದ್ದಾರೆ.ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣದ ಬೋಧಕರಾದ ಶ್ರೀಮತಿ ಲಕ್ಷ್ಮಿಬಾಯಿ ಮೇಡಂ ಹಾಗೂ ಶಿಕ್ಷಕರಾದ ಲಾಳೆ ಮಶಾಕ್ ಬಳಬಟ್ಟಿ ದಿಲೀಪ್ ಹೂಗಾರ್ ಶಿಕ್ಷಕರು ಹಾಗೂ ದುಂಡಪ್ಪ ಶಿಕ್ಷಕರು ಮತ್ತು ಬಸವರಾಜ್ ಶಿಕ್ಷಕರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಊರಿನ ಕ್ರೀಡಾ ಅಭಿಮಾನಿಗಳು ಮತ್ತು ಊರಿನ ಗಣ್ಯರು ತಾಲೂಕ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
