ಬೆಂಗಳೂರು :ಹೆಚ್ ಎಸ್ ಆರ್ ಸಿಟಿಜನ್ ಫೋರಂ ರವರು ಎಚ್ಎಸ್ಆರ್ ಬಡಾವಣೆಯ ಸೆಕ್ಟರ್ 7ರ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಯ ತಯಾರಿಕಾ ಕಾರ್ಯಗಾರವನ್ನು ಏರ್ಪಡಿಸಿದ್ದರು. ಈ ಕಾರ್ಯ ಗಾರದಲ್ಲಿ ತರಬೇತಿಯ ಜೊತೆಗೆ ರಾಸಾಯನಿಕ ಮುಕ್ತ ಹಾಗೂ ಪರಿಸರ ಸ್ನೇಹಿ ಹಬ್ಬಗಳ ಆಚರಣೆಯ ಕುರಿತು ಅರಿವು ಮಾಡಿಸಲಾಯಿತು. ಸುಮಾರು ೫೦ ಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಗಾರದಲ್ಲಿ ಭಾಗವಹಿಸಿ ಇದರ ಲಾಭವನ್ನು ಪಡೆದುಕೊಂಡರು.
ಹೆಚ್ ಎಸ್ ಆರ್ ಸಿಟಿಜನ್ ಫೋರಂ ರವರು ಕಳೆದ ಎಂಟು ವರ್ಷಗಳಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ
ತಯಾರಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ಜೆಪಿ ನಗರದ ನೋಬಲ್ ಕಾಲೇಜ್ ,ಸಲ ಪುರಿಯ ಸೇರನಿಟಿ ಅಪಾರ್ಟ್ಮೆಂಟ್, ಹೇಮಾವತಿ ಉದ್ಯಾನವನ ಇತ್ಯಾದಿ ಸ್ಥಳಗಳಲ್ಲಿ ಈಗಾಗಲೇ ಇದೇ ರೀತಿಯ ಕಾರ್ಯಗಾರವನ್ನು ಏರ್ಪಡಿಸಿದ್ದಾರೆ. ಇದುವರೆಗೆ 130ಕ್ಕೂ ಹೆಚ್ಚು ಮಕ್ಕಳು ಇದರ ಲಾಭ ಪಡೆದಿದ್ದಾರೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಕಾರ್ಯಾಗಾರಗಳನ್ನು ಆಯೋಜಿಸುವ ಯೋಜನೆ ಹೆಚ್ ಎಸ್ ಆರ್ ಸಿಟಿಜನ್ ಫೋರಂ ಗೆ ಇದೆ. ಹೆಚ್ ಎಸ್ ಆರ್ ಸಿಟಿಜನ್ ಫೋರಂರವರು ಘನ ತ್ಯಾಜ್ಯ ನಿರ್ವಹಣೆ ಮತ್ತು ರಾಸಾಯನಿಕ ಮುಕ್ತ ಹಾಗೂ ಪರಿಸರ ಸ್ನೇಹಿ ಹಬ್ಬಗಳ ಆಚರಣೆಯ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ನೂರಾರು ಶಿಬಿರಗಳನ್ನು ಏರ್ಪಡಿಸಿದೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ