ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೋಕೋಪಯೋಗಿ ಅತಿಥಿ ಗೃಹದಲ್ಲಿ ಏರ್ಪಡಿಸಿದ್ದ ಹನೂರು ತಾಲೂಕು ನಾಯಕ ಘಟಕದ ನೂತನ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಹುತ್ತುರು ಗ್ರಾಮದ ಪುಟ್ಟ ವೀರ ನಾಯಕ ಅಯೇಕೆ ಆದರೆ ಉಪಾಧ್ಯಕ್ಷರು ಆಗಿ ಬಂಡಳ್ಳಿ ಗ್ರಾಮದ ವೆಂಕಟಾಚಲ( ತಿರುಪತಿ )ಹಾಗೂ ನಿರ್ದೇಶಕರಾಗಿ ಚಂಗಡಿ ರಾಚಪ್ಪ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಪಟ್ಟಿಗೆ ನಾಯಕ ಅವರು ಮಾತನಾಡಿ ಹನೂರು ತಾಲೂಕಿನ ನೂತನ ನಾಯಕರ ಘಟಕ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಿರುವುದು ಸಂತಸದ ವಿಷಯ ಒಂದು ಸಂಘ ಸ್ಥಾಪನೆ ಮಾಡಿಕೊಳ್ಳುವುದು ಆ ಜನಾಂಗದ ಏಳಿಗೆಗಾಗಿ ಜನಾಂಗವು ಶೈಕ್ಷಣಿಕವಾಗಿ ಹಾಗೂ ಸಮಾಜಿಕವಾಗಿ ಮುಂದೆ ಬರಬೇಕು ಎಂದು ಹಾಗೆಯೇ ನಮ್ಮ ಜನಾಂಗಕ್ಕೆ ಬರುವಂಥ ಎಲ್ಲಾ ಸರಕಾರಿ ಸವಲತ್ತು ಗಳನ್ನೂ ಪಡೆದು ಕೊಳ್ಳಲು ಜನಾಂಗದ ಪ್ರತಿಯೊಬ್ಬರಿಗೂ ತಲುಪುವ ಹಾಗೆ ಮಾಡಬೇಕು ಹಾಗೂ ಎಲ್ಲರೂ ಒಗ್ಗಟ್ಟಾಗಿ ಒಮ್ಮತದಿಂದ ಸಂಘ ಮುಂದೆವರಿಸಿ ಸಿಕೊಂಡು ಹೋಗಬೇಕು ಎಂದರು.
ನಂತರ ಗೌರವ ಅಧ್ಯಕ್ಷರಾದ ಶಿವಣ್ಣ ಮಾತನಾಡಿ ನಮ್ಮ ಸಂಘವು 2024 -2025 ನೇ ಸಾಲಿಗೆ ಮುಂದೇವರೆಯಲು ಮಾಡಿಕೊಂಡಿದ್ದೇವೆ ಹಾಗೆಯೇ ಇದು ಸರ್ಕಾರದಿಂದ ನೋಂದಣಿ ಕೂಡಾ ಆಗಿದೆ ಸಂಘದ ಬೈ ಲಾ ಪ್ರಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ನಿರ್ದೇಶಕರುಗಳು ಹಾಗೂ ಖಜಾಂಚಿ ಸದಸ್ಯರುಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ ಸಂಘದ ಮೂಲ ಉದ್ದೇಶ ಸರ್ಕಾರದಿಂದ ಬರುವಂತಹ ಸವಲತ್ತುಗಳನ್ನು ಜನಾಂಗಕ್ಕೆ ತಲುಪಿಸುವುದು ಹಾಗೂ ಶೈಕ್ಷಣಿಕವಾಗಿ ಹಿಂದುಳಿದಂತಹ ಮಕ್ಕಳಿಗೆ ಪ್ರೋತ್ಸಾಹಿಸುವುದು ಹಾಗೂ ಜನಾಂಗದ ಆಗುಹೋಗುಗಳನ್ನು ಗಮನಿಸಿಕೊಂಡು ಸಂಘವನ್ನು ಮುಂದುವರಿಸಿಕೊಂಡು ಹೋಗುವುದು ಆಗಿದೆ ಎಂದರು.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಪುಟ್ಟ ವೀರ ನಾಯಕ,ಉಪಾಧ್ಯಕ್ಷರು ವೆಂಕಟಚಲ, ನಿರ್ದೇಶಕರಾದ ರಾಚಪ್ಪ,ಗೌರವ ಅಧ್ಯಕ್ಷ ಹೆಚ್ ಕೆ ಶಿವಣ್ಣ, ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ನಾಯಕ ಸಮುದಾಯದ ಮುಖಂಡರುಗಳು ಹಾಗೂ ಯುವಕರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್