ಶಿವಮೊಗ್ಗ: ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಎಸ್.ಎನ್ ಚೆನ್ನಬಸಪ್ಪನವರು ಮಾತನಾಡಿ ಹಿಂದುಳಿದ ವರ್ಗಗಳ ನಿಗಮಗಳಿಂದ ಅನೇಕ ಯೋಜನೆಗಳಿವೆ. ಅವುಗಳ ಸದುಪಯೋಗ ಪಡೆದುಕೊಳ್ಳಲು ಅನೇಕ ಹಿಂದುಳಿದ ವರ್ಗಗಳ ಜನ ಕಳೆದ ವರ್ಷ ಅರ್ಜಿಗಳನ್ನು ಹಾಕಿದ್ದರು. ಅದರೆ ರಾಜ್ಯ ಸರ್ಕಾರವು ನಮ್ಮ ಕ್ಷೇತ್ರಕ್ಕೆ ನಿಗಧಿ ಪಡಿಸಿದ ಗುರಿಗಳು ಕಡಿಮೆ ಇದುದ್ದರಿಂದ ಅರ್ಜಿ ಹಾಕಿದವರಲ್ಲಿ ಯಾರಿಗೆ ಬಹಳ ಅಗತ್ಯವಿದೆ ಎಂದು ಗುರುತಿಸಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ವರ್ಷ ಸರ್ಕಾರಕ್ಕೆ ಹೆಚ್ಚು ಗುರಿಗಳನ್ನು ನೀಡಬೇಕೆಂದು ಮನವಿ ಮಾಡುತ್ತೇವೆ ಎಂದು ಹೇಳಿದರು.
ಡಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
- ಡಿ ದೇವರಾಜ ಅರಸ್ ಸ್ವಯಂ ಉದ್ಯೋಗ ಸಾಲ ಯೋಜನೆಯಡಿಯಲ್ಲಿ 20 ಜನರಿಗೆ 1 ಲಕ್ಷದಂತೆ ಒಟ್ಟು 20 ಲಕ್ಷ ರುಪಾಯಿ ನೀಡಲಾಯಿತು.
(ಸಾಲದ ಮೊತ್ತ ರೂ. 80,000 ಸಹಾಯಧನ ರೂ. 20,000) - ಹೋಲಿಗೆ ಯಂತ್ರ ವಿತರಣಾ ಯೋಜನೆಯಡಿಯಲ್ಲಿ ಒಟ್ಟು 36 ಜನರಿಗೆ ಹೋಲಿಗೆ ಯಂತ್ರ ನೀಡಲಾಯಿತು.
- ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ 2 ಫಲಾನುಭವಿಗಳನ್ನು ಆಯ್ಕೆಮಾಡಿದ್ದು, ಪ್ರತಿಯೊಬ್ಬರಿಗೂ 3 ಲಕ್ಷ ಸಹಾಯಧನದಂತೆ ಒಟ್ಟು 6 ಲಕ್ಷ ನೀಡಲಾಯಿತು.
ಒಕ್ಕಲಿಗ ಅಭಿವೃದ್ಧಿ ನಿಗಮ - ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ 5 ಫಲಾನುಭವಿಗಳನ್ನು ಆಯ್ಕೆಮಾಡಿದ್ದು, ಪ್ರತಿಯೊಬ್ಬರಿಗೂ 3 ಲಕ್ಷ ಸಹಾಯಧನದಂತೆ ಒಟ್ಟು 15 ಲಕ್ಷ ನೀಡಲಾಯಿತು.
ವೀರಶೈವ ಲಿಂಗಾಯುತ ಅಭಿವೃದ್ಧಿ ನಿಗಮ - ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ 2 ಫಲಾನುಭವಿಗಳನ್ನು ಆಯ್ಕೆಮಾಡಿದ್ದು, ಪ್ರತಿಯೊಬ್ಬರಿಗೂ 3 ಲಕ್ಷ ಸಹಾಯಧನದಂತೆ ಒಟ್ಟು 6 ಲಕ್ಷ ನೀಡಲಾಯಿತು.
ಒಟ್ಟು 3 ನಿಗಮಗಳಿಂದ 52,40,000/- (ಐವತ್ತೇರಡು ಲಕ್ಷದ ನಲವತ್ತು ಸಾವಿರ) ರೂ.ಗಳನ್ನು ನೀಡಲಾಯಿತು.
ಮಾನ್ಯ ಶಾಸಕರಾದ ಶ್ರೀ ಎಸ್.ಎನ್ ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕರು ಶ್ರೀಮತಿ ಮಹಾದೇವಿ, ಸೂಡಾ ಮಾಜಿ ಅಧ್ಯಕ್ಷರಾದ ಜ್ಞಾನೇಶ್ವರ್, ಎನ್ ಜೆ ನಾಗರಾಜ್, ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಶ್ರೀಮತಿ ಸುರೇಖಾ ಮುರುಳೀಧರ್, ಪಾಲಿಕೆ ಮಾಜಿ ಸದಸ್ಯರಾದ ಪಿ ಪ್ರಭಾಕರ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ನವುಲೆ, ಮಹಿಳಾ ಮೋರ್ಚಾ ಅಧ್ಯಕ್ಷರಾದ ರಶ್ಮಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಗಳಾದ ಯಶೋಧ, ನಿರ್ಮಲಾ, ನಗರ ಮಾಧ್ಯಮ ಪ್ರಮುಖರಾದ ಶ್ರೀನಾಗ್‌ರವರು ಉಪಸ್ಥಿತರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.