ಬೀದರ್ :ಕನ್ನಡ ಸಾಹಿತ್ಯ, ಜಾನಪದ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಬೆಳೆಸುವಲ್ಲಿ ಅಲ್ಲದೆ ಶರಣ ಸಾಹಿತ್ಯ ಪರಿಷತ್ತು ಸಂಘಟಿಸಿ, ಬೆಳೆಸಿ , ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಪುಸ್ತಕಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಣೆ ಮಾಡಿದ ಕರುನಾಡಿನ ಹೆಮ್ಮೆಯ ಧೀಮಂತ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪನವರು.
ಚನ್ನಬಸಪ್ಪನವರು ಈ ನಾಡಿನ ಶ್ರೇಷ್ಠ ಜಾನಪದ ವಿದ್ವಾಂಸರು, ಜನಪರ ಸೇವೆಯನ್ನು ಸೇವೆಯೇ ಶ್ರೇಷ್ಠ ಜೀವನವೆಂದು ಅರಿತುಕೊಂಡು ಹೆಜ್ಜೆ ಹಾಕುತ್ತಿರುವವರು.
ಗೊ. ರು. ಚನ್ನಬಸಪ್ಪ ನವರು
ಜಾನಪದ ತಜ್ಞರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಅತ್ಯಂತ ನಿಷ್ಕಲ್ಮಶ, ನಿಷ್ಕಳಂಕ ಮನಸ್ಸಿನಿಂದ ಕನ್ನಡ ಸಾಹಿತ್ಯ ಸೇವೆಯನ್ನು ಸಲ್ಲಿಸಿ, ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ.
ಇದೀಗ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಅತ್ಯಂತ ಹಿರಿಯ ಮುತ್ಸದ್ಧಿಯಾದರೂ ಸಹ ಸಾಹಿತ್ಯ ಸೇವೆಯನ್ನು ಮಾಡಲು ಎಂದೆಂದೂ ಹಿಂದೆ ಬಿದ್ದವರಲ್ಲ. ಸದಾ ಕಾಲ ಕನ್ನಡ ಸಾಹಿತ್ಯ ಸೇವೆಯನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡು ಸದಾಕಾಲ ಕನ್ನಡದ ವೈಭವಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ.
ಇಂತಹ ಅನೇಕ ಸಾಹಿತ್ಯ ಸೇವೆಗಳನ್ನು ಮಾಡಿಕೊಂಡು ಬರುತ್ತಿರುವ ಈ ನಾಡಿನ ಹೆಮ್ಮೆಯ ಗೊ.ರು.ಚನ್ನಬಸಪ್ಪ ನವರು ಕರುನಾಡಿಗೆ
ಹಾಗೂ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಅನುಪಮ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಮಂಡ್ಯದಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಮಾಡಬೇಕೆಂದು ಈ ಮೂಲಕ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ್ ಜಿಲ್ಲೆಯ ವೃತ್ತಿಯಿಂದ ಒತ್ತಾಯಿಸುತ್ತೇವೆ.
ಈ ನಿಟ್ಟಿನಲ್ಲಿ ಕರ್ನಾಟಕ ಘನ ಸರ್ಕಾರದ ಮುಖ್ಯಮಂತ್ರಿಗಳಾದಂತಹ ಗೌರವಾನ್ವಿತ ಶ್ರೀ ಸಿದ್ದರಾಮಯ್ಯನವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದಂತ ಸನ್ಮಾನ್ಯ ಶ್ರೀ ಶಿವರಾಜ್ ತಂಗಡಿಗಿಯವರು ಕರ್ನಾಟಕ ರಾಜ್ಯದ ಎಲ್ಲಾ ಸಚಿವರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮಹೇಶ್ ಜೋಷಿಯವರು ಹಾಗೂ ಕಸಾಪ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರು ಗೊ.ರು.ಚನ್ನಬಸಪ್ಪನವರನ್ನು ಸರ್ವಾನುಮತದಿಂದ ಅಖಿಲ ಭಾರತ್ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಈ ಮೂಲಕ ಜಿಲ್ಲಾಧ್ಯಕ್ಷರಾದ ಸಂಗಮೇಶ ಎನ್ ಜವಾದಿ ಪದಾಧಿಕಾರಿಗಳಾದ ಬಸವರಾಜ ಮಂಕಲ್, ಚಂದ್ರಶೇಖರ್ ನಾರಾಯಣಪೇಟ್, ವಿಶ್ವನಾಥ ಮುಕ್ತ, ಸಂಗಮೇಶ ಹೊಳೆಸಮುದ್ರ, ಶೌರ್ಯ ಜವಾದಿ, ರಾಕೇಶ ಗುಡ್ಡಾ, ಶ್ರಾವ್ಯ ಜವಾದಿ, ಬಸವರಾಜ ಅಂಕಲಗಿ, ಚನ್ನವೀರ ಲಾತೂರೆ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.