ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗದಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ, ಶ್ರೀಗುರುಕುಲು ಪಿ.ಯು ಕಾಲೇಜು ಹಾಗೂ ಎಂಪ್ರೇಸ್ ಪಿ.ಯು ಕಾಲೇಜು ಸಹಯೋಗದಲ್ಲಿ ಪದವಿ ಪೂರ್ವ ಕಾಲೇಜು ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಶಾಸಕ ಹೆಚ್.ವಿ ವೆಂಕಟೇಶ್ ಮಾತನಾಡಿ ಪಠ್ಯದ ಚಟುವಟಿಕೆಯೊಂದಿಗೆ ಕ್ರೀಡಾ ಚಟುವಟಿಕೆಗಳಿಗೂ ಮಹತ್ವವನ್ನು ನೀಡುವ ಮೂಲಕ ವಿದ್ಯಾರ್ಥಿಗಳು ಉತ್ತಮ ಆಟವಾಡಿ ಆ ಮೂಲಕ ತಮ್ಮ ಶಾಲೆಗಷ್ಟೇ ಅಲ್ಲದೇ ತಾಲ್ಲೂಕು,ಜಿಲ್ಲೆ, ರಾಜ್ಯ ಮತ್ತು ದೇಶದ ಕೀರ್ತಿ ತರಬೇಕೆಂದರು, ಶಿಕ್ಷಕರು ಮಕ್ಕಳ ಆಸಕ್ತಿಗೆ ಅನುಗುನವಾಗಿ ಕ್ರೀಡೆಗಳಿಗೆ ಪ್ರೋತ್ಸಹಿಸುವ ಮೂಲಕ ಬೆಂಬಲಿಸಬೇಕೆಂದರು.
ಈ ವೇಳೆ ಸದಸ್ಯರಾದ ಕಲ್ಪವರಕ್ಷ ರವಿ, ಗೋರ್ತಿ ನಾಗರಾಜು,ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ, ರಿಜ್ವಾನ್ ಉಲ್ಲಾ, ರೋರಣ್ಣ, ಮಂಜುನಾಥ್, ವೀರೆಂದ್ರ, ಶ್ರೀ ಗುರುಕುಲ ಶಾಲೆಯ ನಾಗಭೂಷಣ್, ದೈಹಿಕ ಶಿಕ್ಷಣ ಇಲಾಖೆಯ ತಾಲ್ಲೂಕು ಪರಿವೀಕ್ಷಕ ನರಸಿಂಹಮೂರ್ತಿ,ದೈಹಿಕ ಶಿಕ್ಷಕರಾದ ರಾಮಾಂಜಿನೇಯ, ತಿಮ್ಮಾನಾಯ್ಕ, ಶ್ರೀನಿವಾಸ್,ಬಾಲು ವಿಜಯ್, ರಾಮಾಂಜಿನೇಯ ಇದ್ದರು.
ವರದಿ ಕೆ ಮಾರುತಿ ಮುರಳಿ




















