ವಿಜಯಪುರ :ಶ್ರೀ ಚಿದಂಬರ ಸೇವಾ ಸಮಿತಿ, ವಿಜಯಪುರ ವತಿಯಿಂದ ಶ್ರಾವಣ ಮಾಸದದ 48ನೇ ವರ್ಷದ ಶ್ರೀ ಶಿವಚಿದಂಬರ ಅಪ್ರಕಾಶಿತ ಲೀಲಾಗ್ರಂಥ ಪಠಣದ ಮಂಗಲ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಗರದ ಶ್ರೀ ಶಿವಚಿದಂಬರೇಶ್ವರ ದೇವಸ್ಥಾನದಲ್ಲಿ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಸಂಪನ್ನವಾದವು.
ಬೆಳಿಗ್ಗೆ 6 ಗಂಟೆಗೆ ಕಾಕಡಾರತಿ 7 ಗಂಟೆಗೆ ಕ್ಷೀರಾಭಿಷೇಕ ಹಾಗೂ ರುದ್ರಾಭಿಷೇಕ 8 ಗಂಟೆಗೆ ಶ್ರೀಮದ್ ಯೋಘೀಶ್ವರ ಯಜ್ಞವಲ್ಕ ಮಹರ್ಷಿಗಳ ಅಷ್ಟೋತ್ತರ ,10 ಗಂಟೆಗೆ ಸತ್ಯ ಚಿದಂಬರ ವ್ರತ ಮತ್ತು ಕಥೆ ಕಾರ್ಯಕ್ರಗಳು ಜರುಗಿದವು.
ದಿವ್ಯ ಸಾನಿಧ್ಯವನ್ನು ವಹಿಸಿದ್ದ ಮುರಗೋಡ ಕೆಂಗೇರಿಯ ಶಿವಚಿದಂಬರೇಶ್ವರ ಮಠ ಪೀಠಾಧಿಪತಿಗಳಾದ ಪ.ಪೂ. ಶ್ರೀ ದಿವಾಕರ ದೀಕ್ಷಿತ ಶಂಕರ ದೀಕ್ಷಿತರು ಪ.ಪೂ. ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ದ್ವಾದಶ ಪೀಠಾಧಿಕಾರಿಗಳಾ ಶ್ರೀ ಜ್ಞಾನೇಶ್ವರ ಮಠ ಲೋಕಾಪೂರ ಆಗಮಿಸಿ ಆಶೀರ್ವಚನ ನೀಡಿದರು.
ನಂತರ ಶಿವಚಿದಂಬರ ಮಹಾಸ್ವಾಮಿ ರಥೋತ್ಸವ. ಶ್ರೀ ಶಿವಚಿದಂಬರೇಶ್ವರ ಮಹಾಸ್ವಾಮಿಗೆ ಮಹಾಮಂಗಳಾರತಿ. ನಂತರ ಮಹಾ ಪ್ರಸಾದ, ಸಂಜೆ ಸಾಂಪ್ರದಾಯಿಕ ಶ್ರೀ ಚಿದಂಬರ ಭಜನೆ ಮಹಾಮಂಗಳಾರತಿ ಮಂತ್ರಪುಷ್ಪ ಜರುಗಿತು.
ಈ ಸಂದರ್ಭದಲ್ಲಿ ಶ್ರಿ ಶಿವಚಿದಂಬರೇಶ್ವರರ ಅಸಂಖ್ಯಾತ ಭಕ್ತ ಸಮೂಹ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾದರು.
ವರದಿ-ರಜಾಕಸಾಬ ಹೊರಕೇರಿ