ಜೇವರ್ಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯ ಮಟ್ಟದ ಗಮಕ ಸಮ್ಮೇಳ ಕಾರ್ಯಕ್ರಮಕ್ಕೆ ಅದ್ದೂರಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗಮಕ ಸಮ್ಮೇಳನ ಎಂದರೇನು? ಅದರ ಮಹತ್ವವೇನು ಹಾಗೂ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಮತ್ತು ಸಾಹಿತ್ಯಕಾರರಿಂದ ದಿನಾಂಕ ೨೧-೦೯-೨೦೨೪ ಹಾಗೂ ೨೨-೦೯-೨೦೨೪ ರಂದು ಜೇವರ್ಗಿಯ ಹೃದಯ ಭಾಗದಲ್ಲಿ ನಡೆಯುವ ಕನ್ನಡ ಭವನದಲ್ಲಿ ಕನ್ನಡದ ಹಬ್ಬವು ಬಹಳ ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ನಡೆಯಲಿದೆ ಹಾಗಾಗಿ ಎಲ್ಲಾ ಕನ್ನಡಾಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕ.ಸಾ.ಪ.ಗೌರವ ಅಧ್ಯಕ್ಷರಾದ ಚನ್ನಮಲ್ಲಯ್ಯ ಹಿರೇಮಠ ಹುಲ್ಲೂರ,ಗೌರವ ಕಾರ್ಯದರ್ಶಿಗಳಾದ ಕಲ್ಯಾಣಕುಮಾರ ಸಂಗಾವಿ,ಚಂದ್ರಶೇಖರ ತುಂಬಗಿ, ಎಸ್ ಟಿ ಬಿರಾದಾರ,ಜಗಧೀಶ ಉಕನಾಳ್ಕರ್,ಹಣಮಂತ್ರಾಯ ರಾಂಪೂರ,ಬಂಗಾರೆಪ್ಪ ಕೋಳಕೂರ, ಧನರಾಜ ರಾಠೋಡ್,ಸುರೇಶ ಹಿರೇಮಠ,ಶರಣು ನೇರಡಗಿ,ಸಂಗಮೇಶ ಸಂಕಾಲಿ,ಶಾಂತಪ್ಪ ತಳವಾರ ಹಾಗೂ ಪದಾಧಿಕಾರಿಗಳು ಇದ್ದರು.
ವರದಿ: ಚಂದ್ರಶೇಖರ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.