ಕಲಬುರಗಿ: ನಗರದ ಸರ್ಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ರೆಡ್ ಕ್ರಾಸ್ ಘಟಕದ ವತಿಯಿಂದ ಕುಸನೂರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಉದ್ಘಾಟಕರಾಗಿ ಸರಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ, ಅದ್ಯಕ್ಷತೆಯನ್ನು ಕುಸುನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕುಪೇಂದ್ರ ಬರಗಾಲಿ ವಹಿಸಿಕೊಂಡರು. ಕಾಲೇಜಿನ ಯುಜಿ ವಿಭಾಗದ ಡೀನರಾದ ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ ಮೀನಾಕ್ಷಿ, ಡಾ. ಅಶೋಕ, ಡಾ. ಶರಣು ಪಡಶೆಟ್ಟಿ , ಮಧು, ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಪ್ರೊ.ದಿನೇಶ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದ ಅತಿಥಿಗಳಾಗಿ ನೇತ್ರಾಧಿಕಾರಿಗಳಾದ ಸಿರಾಜ ದಸ್ತಗಿರ,ಜಹೀರ್ ಖಾನ್ ಗ್ರಾಮದ ನಿವಾಸಿಗಳಿಗೆ ಹಿರಿಯರಿಗೆ ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಿ ಸಲಹೆ ನೀಡಿದರು. ವೈದ್ಯಾಧಿಕಾರಿಗಳಾದ ಡಾ. ಶ್ವೇತಾ ರಾಜಗಿರಿ,ಡಾ.ದೀಪಾ ರಾಥೋಡ, ಡಾ. ಆರಾಧನಾ ರಾಥೋಡ್, ಡಾ. ಸಂಧ್ಯಾ ಕಾನೇಕರ ಅವರು ಬಾಯಿ ಮತ್ತು ಹಲ್ಲಿನ ಆರೋಗ್ಯದ ತಪಾಸಣೆ ಮಾಡಿ ಮುನ್ನೆಚ್ಚರಿಕೆ ಕ್ರಮಗಳು ಮತ್ತು ನಿರ್ವಹಣೆಯ ಕುರಿತು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಊರಿನ ಹಿರಿಯರು, ಯುವಕರು, ಪ್ರಾಣಿಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಮೀನಾಕ್ಷಿ ನಿರೂಪಿಸಿದರು. ವಿದ್ಯಾರ್ಥಿ ನಂದಕುಮಾರ್ ವಂದಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.