ಕೊಟ್ಟೂರು : ಶ್ರೀ ಹರಿಬಾಬು ಐ ಪಿ ಎಸ್ ಪೋಲಿಸ್ ಅಧೀಕ್ಷಕರು ವಿಜಯನಗರ ಜಿಲ್ಲೆ ಮತ್ತು ಶ್ರೀ ಸಲೀಂ ಭಾಷಾ ಎ. ಎಸ್. ಪಿ.ವಿಜಯನಗರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಮಲ್ಲೇಶಪ್ಪ ಮಲ್ಲಾಪುರ ,ಡಿ ವೈ ಎಸ್ ಪಿ ಕೂಡ್ಲಿಗಿ ಉಪವಿಭಾಗ ರವರ ಮುಂದಾಳತ್ವದಲ್ಲಿ ಹಾಗೂ ಶ್ರೀ ವೆಂಕಟಸ್ವಾಮಿ ಸಿ ಪಿ ಐ ಕೊಟ್ಟೂರು ಮತ್ತು ವಿಕಾಸ್ ಲಮಾಣಿ ಸಿ, ಪಿ, ಐ, ಹಗರಿಬೋಮ್ಮನಹಳ್ಳಿ ರವರುಗಳ ನೇತ್ರತ್ವದಲ್ಲಿ
ಕೊಟ್ಟೂರು ಪೋಲಿಸ್ ಠಾಣೆಯ ಪಿ,ಎಸ್,ಐ ಗೀತಾಂಜಲಿ ಶಿಂಧೆ ಮತ್ತು ಸಿಬ್ಬಂದಿಯಾದ ವೀರೇಶಿ, ಬಸವರಾಜ, ಶಶಿಧರ ವೈ , ರೇವಣಸಿಧ್ದಪ್ಪ, ಮತ್ತು ಕೂಡ್ಲಿಗಿಯ ಡಿ ಎಸ್ ಪಿ ಕಛೇರಿಯ ಸಿಬ್ಬಂದಿಯಾದ ಸಿ,ಕೊಟ್ರೇಶಿ , ಹಗರಿಬೋಮ್ಮನಹಳ್ಳಿಯ ಪೋಲೀಸ್ ಠಾಣೆಯ ಸಿಬ್ಬಂದಿಯವರಾದ ಚಿದಾನಂದ ಇವರಗಳ ಒಂದು ತಂಡವನ್ನು ರಚನೆ ಮಾಡಿದ್ದು ಖಚಿತ ಮಾಹಿತಿ ಮೇರೆಗೆ ದಿನಾಂಕ 07-9-2024 ರಂದು ಬೆಳಿಗ್ಗೆ 7-30 ಗಂಟೆಗೆ ತನಿಖಾಧಿಕಾರಿಗಳು ಮತ್ತು ಸಿಬ್ಬಂದಿಯವರ ತಂಡ ಅರೋಪಿತನಾದ ಹೆಚ್ ಹನುಮಂತ ತಂದೆ ಕೊಲ್ಲಪ್ಪ 26 ವರ್ಷ ,ಭೋವಿ ಜನಾಂಗ ಗಾರೆ ಕೆಲಸ ವಾಸ ಭೈರಾದೇವರ ಗುಡ್ಡ ಗ್ರಾಮ ಕೊಟ್ಟೂರು ತಾಲೂಕು ಹಾಲಿವಾಸ ಕರಿಮಾರಮ್ಮ ದೇವಸ್ತಾನದ ಹತ್ತಿರ ಕರಿ ಮಾರಮ್ಮ ಕಾಲೋನಿ ಬಳ್ಳಾರಿ ನಗರ ಈತನನ್ನು ಪೋಲಿಸ್ ಸಿಬ್ಬಂದಿ ವಶಪಡಿಸಿಕೊಂಡು ಈ ಅರೋಪಿಯಿಂದ
1) ಬಂಗಾರದ ಒಂದು ನೆಕ್ ಚೈನ್ ಮತ್ತು ಒಂದು ಇನಿಷಿಯಲ್ ಉಂಗರ
2)ಬಂಗಾರದ ಒಂದು ಜೊತೆ ಹ್ಯಾಂಗಿಂಗ್ಸ್ ಮತ್ತು ಒಂದು ಕೊರಳು ಚೈನ್
3) ಬಂಗಾರದ ಮೂರು ಜೊತೆ ಜುಮಿಕಿ ಬೆಂಡೋಲೆಗಳು
4) ಬಂಗಾರದ ಎಂಟು ಸಣ್ಣ ಉಂಗುರುಗಳನ್ನು .
ಎಲ್ಲಾ ಒಟ್ಟು 2,65,000/ರೂ ಬೆಲೆ ಬಾಳುವ ಬಂಗಾರದ ಅಭರಣಗಳನ್ನು ಜಪ್ತು ಪಡಿಸಿಕೊಂಡು .
ಅರೋಪಿತನು ಈ ಪ್ರಕರಣಗಳಲ್ಲಿ ಅಲ್ಲದೇ ಹೆಚ್ ಬಿ ಹಳ್ಳಿ ಪೋಲಿಸ್ ಠಾಣೆಯ ಸರಹದ್ದಿನಲ್ಲಿ ಮತ್ತು ತುಮಕೂರು ನಗರ ಪೋಲಿಸ್ ಠಾಣೆಯ ಸರ ಹದ್ದಿನಲ್ಲಿ ಸಹ ಕಳ್ಳತನ ಮಾಡಿರುವುದಾಗಿ ಅರೋಪಿಯು ಒಪ್ಪಿಗೆ ಕೊಂಡಿರುತ್ತಾನೆ ಎಂದು ಪೋಲೀಸ್ ಸಿಬ್ಬಂದಿ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ
ತಂಡದ ಕಾರ್ಯಚರಣೆ ಯಶಸ್ವಿಯನ್ನು ಗಮನಿಸಿದ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಹರಿಬಾಬು ಕೊಟ್ಟೂರು ಪೊಲೀಸ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.