ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ದಮ್ಮೂರಲ್ಲಿ ಗುರುವಂದನಾ ಕಾರ್ಯಕ್ರಮ


ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ದಮ್ಮೂರ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೯೯೨-೯೩ ನೇ ಸಾಲಿನ ೭ ನೇ ತರಗತಿ ಅಭ್ಯಾಸ ಮಾಡಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ತಮಗೆ ಕಲಿಸಿದ ಪ್ರಾಥಮಿಕ ಶಾಲಾ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಊರಿನ ಹನುಮಂತ ದೇವರ ಗುಡಿಯಿಂದ ಡೊಳ್ಳುವಾದ್ಯಗಳ ಮೆರವಣಿಗೆಯೊಂದಿಗೆ ಪುಷ್ಪ ವೃಷ್ಠಿಗೈಯುತ್ತ ಪ್ರವಚನಕಾರ ಪ್ರದೀಪ ಗುರೂಜಿಯವರ ನೇತೃತ್ವದಲ್ಲಿ ಎಲ್ಲ ಗುರುಗಳನ್ನು ಹಾರ್ದಿಕವಾಗಿ ವೇದಿಕೆ ಕರೆತರಲಾಯಿತ್ತು.
ಶಿಕ್ಷಕರುಗಳಾದ ಎಸ್.ಎಸ್.ಹಳ್ಳೂರ ಎಸ್.ಪಿ.ದಾದಿ, ಶ್ರೀಮತಿ ಜಯಶ್ರೀ ಹಾಗೂ ಜೀವನದುದ್ದಕ್ಕೂ ಶಾಲೆಗೆ ಮಕ್ಕಳನ್ನು ಕರೆತರುವ ಕಾಯಕದಲ್ಲಿ ನಿರತರಾದ ಶಂಕರಪ್ಪ ಬಡಿಗೇರ ಅವರಿಗೆ ಹಾಗೂ ಈಗಾಗಲೇ ಲಿಂಗೈಕ್ಯರಾದ ಎಚ್.ಡಿ.ವಡ್ಡರ ಬಿ.ಆರ್.ಬಿನ್ನೆದ, ಶಾಂತಯ್ಯ ಕಟಾಪೂರಮಠ, ಇವರುಗಳ ಕುಟುಂಬಸ್ಥರಿಗೆ ಸನ್ಮಾನಿಸಲಾಯಿತು ಹಾಗೂ ಶ್ರೀ ದಿಡಗಿನ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಖ್ಯಾತ ಆಧ್ಯಾತ್ಮಿಕ ಚಿಂತಕರಾದ ಶ್ರೀ ಪ್ರದೀಪ ಗುರೂಜಿಯವರ ಪ್ರವಚನ ಕಾರ್ಯಕ್ರಮದಲ್ಲಿ ಈ ಗುರುವಂದನೆಯನ್ನು ನೇರವೆರಿಸಲಾಗಿತ್ತು. ಪ್ರದೀಪ ಗುರುಜಿ ಆಶೀರ್ವನ ನೀಡಿ ಗುರುವಂದನ ಈ ಕಾರ್ಯಕ್ರಮ ಮಾಡುವ ಪರಂಪರೆ ಶ್ಲಾಘನೀಯವಾದುದು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದ ತಿಮ್ಮಾಪೂರ ಗ್ರಾಮದ ನಿವೃತ್ತ ಪ್ರೌಢ ಶಾಲಾ ಶಿಕ್ಷಕ ಎಸ್.ಎಸ್.ಹಳ್ಳೂರ ಮಾತನಾಡಿ ಇಂಥ ಚಿಕ್ಕಹಳ್ಳಿಯಲ್ಲಿ ಶಿಕ್ಷಕರ ಬಗ್ಗೆ ಇರುವ ಪ್ರೀತಿ ಗುರುಗಳಿಗೆ ಕೊಡುವ ಮಹತ್ವ ವಿಶೇಷವಾದದ್ದು. ಈ ಊರ ಜನರಿಗೆ ಪ್ರವಚನಗಳ ಮೂಲಕ ಆಧ್ಯಾತ್ಮಿಕ ಸಂಸ್ಕಾರ ನೀಡಿದ ಪ್ರದೀಪ ಗುರೂಜಿ ಅವರ ಕಾರ್ಯ ಶ್ಲಾಘನೀಯವಾದುದು. ಮನುಕುಲವನ್ನು ಬದಲಾವಣೆ ಮಾಡುವ ಶಕ್ತಿ ಶಿಕ್ಷಣ ಹಾಗೂ ಆಧ್ಯಾತ್ಮಿಕತೆಗೆ ಇದೆ ಎಂದು ಹೇಳಿದರು.
ಮುಂದುವರೆದು ಈ ಚಿಕ್ಕಹಳ್ಳಿಯಲ್ಲಿ ಇದ್ದು ಮಕ್ಕಳಿಗೆ ಶಿಕ್ಷಣ ಕಲಿಸುತ್ತಾ, ನಾನು ಕಲಿಯುತ್ತ ಉನ್ನತ ಶಿಕ್ಷಣ ಪಡೆಯಲು ಸಹಾಯವಾಯಿತು, ಊರಿನ ಜನರು ೮೦ರ ದಶಕದಲ್ಲಿ ಪ್ರೀತಿಯಿಂದ ಕಂಡ ಕ್ಷಣಗಳನ್ನು ಅವರು ನೆನೆದು ಧನ್ಯತೆಯನ್ನು ಅರ್ಪಿಸಿದರು.
ಮುಂದುವರೆದು ಗುರು ಎಂಬ ಎರಡಕ್ಷರದ ಶಬ್ದ ಜಗತ್ತನ್ನೇ ಮುನ್ನಡೆಸುತ್ತದೆ. ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗಲು ಗುರು ಬೇಕೇಬೇಕು. ಎಂದವರಲ್ಲದೇ ಜಗತ್ತಿನ ಪ್ರತಿಯೊಬ್ಬ ಮನುಷ್ಯನಿಗೆ ಗುರುವಿನ ಅವಶ್ಯಕತೆ ಇದೆ. ಗುರು ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ ಎಂದ ಅವರು ಗುರು ಇದರ ಅರ್ಥವೇ ದೊಡ್ಡದು. ಜಗತ್ತಿನಲ್ಲಿ ಗುರುವಿಗಿಂತ ದೊಡ್ಡವರು ಯಾರು ಇಲ್ಲ. ಆದ್ದರಿಂದ ನಮ್ಮ ಹಿರಿಯರು ಆಕಾಶದಲ್ಲಿರುವ ದೊಡ್ಡ ಗ್ರಹಕ್ಕೆ ಗುರು ಎಂದು ಕರೆದರು. ೪೨ ವರ್ಷದ ಹಿಂದೆ ಈ ಊರಿನಲ್ಲಿ ಶಿಕ್ಷಕನಾಗಿದ್ದೆ. ಈ ಸುದೀರ್ಘ ಅವದಿಯ ನಂತರವೂ ನೀವು ನಮ್ಮನ್ನು ನೆನಪಿಟ್ಟು ನಮಗೆ ಸನ್ಮಾನ ಮಾಡುತ್ತಿರುವುದು ಸಂತಸ ತಂದಿದೆ.
ನಿವೃತ್ತ ಶಿಕ್ಷಕ ಎಸ್.ಪಿ.ದಾದಿ ಮಾತನಾಡಿ ನಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ವಿವಿಧ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವುದನ್ನು ಕಂಡು ಗುರುವಿನ ಮನಸ್ಸು ತೃಪ್ತವಾಗಿದೆ ಎಂದು ಹೇಳಿದರು.
ಜಯಶ್ರೀ ದಂಡಿಗಿ ಗುರುಮಾತೆಯವರು ಮಾತನಾಡಿ ಮೂರು ದಶಕಗಳ ನಂತರ ನಾನು ಇಲ್ಲಿಗೆ ಬಂದಿದ್ದೇನೆ ಈ ಊರ ನನಗೆ ದೇವಲೋಕದಂತೆ ಕಾಣುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಶರಣಪ್ಪ ಹುಲ್ಲಾಳ ಖ್ಯಾತ ಜನಪದ ಸಾಹಿತಿ ಬಿ.ಆರ್.ಪೋಲಿಸ್‌ಪಾಟೀಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ