ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಣಪತಿಯನ್ನು ಗ್ರಾಮದ ಹಿರಿಯರು ಹಾಗೂ ಯುವ ಮುಖಂಡರು ಶಾಲಾ ಮಕ್ಕಳು ಶಿಕ್ಷಕರು. ಡೊಳ್ಳು, ಒಡವು ಹೇಳುವ ಮೂಲಕ, ಬಹಳ ಸಂಭ್ರಮದಿಂದ ಶನಿವಾರ ಸಾಯಂಕಾಲ ವಿಘ್ನೇಶ್ವರ ಮೂರ್ತಿಯನ್ನು , ಗ್ರಾಮದ ಗುರು-ಹಿರಿಯರ, ನೇತೃತ್ವದಲ್ಲಿ ವಿಸರ್ಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸುರೇಶ್ ಗೋನಾಳ್, ಛತ್ರಪ್ಪ ಐನಾಯಕ, ಲಕ್ಷ್ಮಣ ಕುಂಟೋಜಿ, ತಿಮ್ಮಣ್ಣ ಕನಕ ರಡ್ಡಿ, ಶಾಲಾ ಶಿಕ್ಷಕರು, ಗ್ರಾಮದ ಯುವ ಸಮುದಾಯದವರು, ಶಾಲಾ ಮಕ್ಕಳು ಭಾಗಿಯಾಗಿದ್ದರು.
