ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಬಡ ರೈತ ಮಲ್ಲಪ್ಪ ಭೀಮರಾಯ ಕಂಬಳಿ (55) ಸಾಲ ಭಾದೆಯಿಂದ ತಮ್ಮ ಸ್ವಂತ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಹತ್ತು ದಿವಸವಾದರೂ ಸಹಿತ ತಾಲೂಕಿನ ಮತಕ್ಷೇತ್ರದ ಶಾಸಕರು (ಕೆಕೆಆರ್‌ಡಿಬಿ) ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಅವರು ಕುಟುಂಬಸ್ಥರಿಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿ ಪರಿಹಾರ ಧನ ವಿತರಣೆ ಮಾಡಬೇಕಾಗಿತ್ತು.ಆದರೆ ಇದುವರೆಗೆ ತಮ್ಮದೇ ಮತಕ್ಷೇತ್ರದ ರೈತ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಹಲವಾರು ಪತ್ರಿಕೆಯಲ್ಲಿ ಪ್ರಕಟಣೆ ಆದರೂ ಸಹಿತ ಭೇಟಿ ನೀಡದಿರುವುದಕ್ಕೆ ಶಾಸಕರ ವಿರುದ್ಧ ಗ್ರಾಮದ ನಿವಾಸಿಯಾದ ಜಟ್ಟಪ್ಪ ಎಸ್ ಹಿರೇ ಪೂಜಾರಿ ಅವರು ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶವನ್ನು ಹೊರ ಹಾಕಿದ್ದಾರೆ ತಮ್ಮದೇ ಮತಕ್ಷೇತ್ರದ ಸಾಮಾನ್ಯ ರೈತ ಮಲ್ಲಪ್ಪ ಕಂಬಳಿ ಅವರು ತಮಗೆ ಮತನೀಡಿ ಆಯ್ಕೆ ಮಾಡಿ ಕಳಿಸಿದ್ದಾರೆ ಶಾಸಕರು ಇದನ್ನು ಪರಿಗಣಿಸಬೇಕು ಇಂತಹ ಸಂದರ್ಭದಲ್ಲಿ ತಾಲೂಕಿನ ಶಾಸಕರಾದ ಡಾ. ಅಜಯಸಿಂಗ್ ಅವರು ಕೂಡಲೇ ಮೃತ ರೈತನ ಕುಟುಂಬಸ್ಥರಿಗೆ ಭೇಟಿಯಾಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಹಾರ ಧನ ನೀಡಬೇಕೆಂದು ಜೆಟ್ಟಪ್ಪ ಎಸ್ ಹಿರೇ ಪೂಜಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.