ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಹಶಿಲ್ದಾರ ಕಛೇರಿ ಸಭಾಂಗಣದಲ್ಲಿ ಅಂತರಾಷ್ಟೀಯ ಪ್ರಜಾಪ್ರಭುತ್ವ ದಿನಾಚರಣೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಸಭೆಯಲ್ಲಿ ಸಮಾಜಕಲ್ಯಾಣ ಇಲಾಖೆ ಮೇನೇಜರ್ ಪಕ್ಕೀರಪ್ಪ ಮಾತನಾಡಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 2007ರಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಪ್ರಾರಂಭಿಸಲಾಯಿತು.ಈ ದಿನವು ವಿಶ್ವದ ಪ್ರಜಾಪ್ರಭುತ್ವದ ಸ್ಥಿತಿಗತಿಯನ್ನು ಪರಿಶೀಲಿಸಲು ಮತ್ತು ಜಾಗತಿಕವಾಗಿ ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ವಿಶ್ವಸಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಮಾನವ ಹಕ್ಕುಗಳ ರಕ್ಷಣೆ, ಅಭಿವೃದ್ಧಿ, ಶಾಂತಿ ಮತ್ತು ಸ್ಥಿರತೆಯ ಮೂಲಕ ಪ್ರಜಾ ಪ್ರಭುತ್ವವನ್ನು ಬಲಪಡಿಸಲು, ಅದರ ಮೌಲ್ಯಗಳು ತತ್ವಗಳನ್ನು ಎತ್ತಿಹಿಡಿಯಲು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವನ್ನು ಆಚರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದಿನಾಂಕ: 15.09.2024 ರಂದು ಬೆಳಿಗ್ಗೆ 08.30 ಗಂಟೆಯಿಂದ 09.30 ಗಂಟೆಯವರೆಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಬೀದರ್ನ ಬಸವ ಕಲ್ಯಾಣ ದಿಂದ ಚಾಮರಾಜನಗರದವರೆಗೆ ಸುಮಾರು 2800 ಕಿ ಮೀ ಉದ್ದದ ಮಾನವ ಸರಪಳಿಯನ್ನು ನಿರ್ಮಿಸಲಾಗುತ್ತಿದೆ. ಇದರ ಭಾಗವಾಗಿ ವಿಜಯನಗರ ಜಿಲ್ಲೆಯಲ್ಲಿಯೂ ಸಹ ಮಾನವ ಸರಪಳಿಯನ್ನು ಜಿಲ್ಲೆಯ ಗಡಿಭಾಗವಾದ ಮುನಿರಾಬಾದ್ 1ನೇ ಸೇತುವೆಯಿಂದ ಪ್ರಾರಂಭಿಸಿ ಜಿಲ್ಲೆಯ ಕೊನೆಯ ಗಡಿಭಾಗವಾದ ಭುವನಹಳ್ಳಿವರೆಗೆ ಸುಮಾರು 38 ಕಿ ಮೀ ವ್ಯಾಪ್ತಿಯ ವರೆಗೆ ರಚಿಸಲಾಗಿದ್ದು, ಸುಮಾರು 40,000 ಜನ ಭಾಗವಹಿಸಲಿದ್ದಾರೆ. ಪ್ರತಿ 1 ಕಿಮೀ ಗೆ ಒಬ್ಬ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮೇಲ್ವಿಚಾರಕರಾಗಿ, ಕಿ.ಮೀ. ಗೆ 10ಜನ ದೈಹಿಕ ಶಿಕ್ಷಕರನ್ನು ನಿಯೋಜಿಸಲಾಗಿರುತ್ತದೆ.ಸದರಿ ಮಾನವ ಸರಪಳಿಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಾಸ್ಟಲ್ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಕಾರ್ಯಕ್ರಮ ಯಶಸ್ವಿಯಾಗಲು ಪ್ರಜಾಪ್ರಭುತ್ವ ದಿನಾಚರಣೆಯ ಮಹತ್ವವನ್ನು ಪ್ರತಿಯೊಬ್ಬರಿಗೂ ತಲುಪಿಸಲು ಸಹಕರಿಸುವಂತೆ ಅನ್ನದಾನೇಶ ಬಿ ಪತ್ತಾರ ಉಪತಹಶೀಲ್ದಾರರು ಸಭೆಯಲ್ಲಿ ಕೋರಿದರು.
ಕೊಟ್ಟೂರು ತಾಲೂಕ ಕಛೇರಿಯ ಮಹಾತ್ಮಗಾಂಧೀಜಿ ಸಭಾಂಗಣದಲ್ಲಿ ನಡೆದ ಪುರ್ವಸಿದ್ದತಾ ಸಭೆಯಲ್ಲಿ ಹೆಚ್ ವಿಜಯಕುಮಾರ್ ಎ.ಡಿ ನರೇಗಾ, ಅಹ್ಮದ್ ಬಿ.ಸಿ.ಎಂ ವಿಸ್ತರಣಾಧಿಕಾರಿಗಳು, ಪಕ್ಕೀರಪ್ಪ ಮ್ಯಾನೇಜರ್ ಸಮಾಜ ಕಲ್ಯಾಣ ಇಲಾಖೆ, ಚೆತನ್ ಜೆಇ ಜೆಸ್ಕಾಂ ಇಲಾಖೆ, ಪಟ್ಟಣ ಪಂಚಾಯಿತಿ ಸಿಬ್ಬಂದಿ R i ಕೊಟ್ರೇಶ್, ಶಿಕ್ಷಣ ಇಲಾಖೆಯ ಅಣಜಿ ಸಿದ್ದಲಿಂಗಪ್ಪ, ಎಸ್.ಎಂ.ಗುರುಬಸವರಾಜ, ವೀರೇಶ್ ತುಪ್ಪದ್, ಸದಾನಂದಯ್ಯ ಹೆಚ್ ಎಂ, ಮುಖಂಡರಾದ ಅಜ್ಜಪ್ಪ ಹೊಟ್ಟೇರ್, ಉಪಖಜಾನೆಯ ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.