ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಂಸದ ಸುನೀಲ್ ಬೋಸ್ ರವರಿಗೆ ಸನ್ಮಾನ ಮತ್ತು ಉಗ್ರಾಣ ನಿಗಮದ ರಾಜ್ಯ ಅಧ್ಯಕ್ಷ ಜಯಣ್ಣ ರವರ ಹುಟ್ಟು ಹಬ್ಬ ಆಚರಣೆ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಎಸ್. ಜಯಣ್ಣ ಅಭಿಮಾನಿ ಬಳಗದ ವತಿಯಿಂದ ಉಗ್ರಾಣ ನಿಗಮದ ರಾಜ್ಯಾಧ್ಯಕ್ಷರು ಹಾಗೂ ಕೊಳ್ಳೇಗಾಲದ ಮಾಜಿ ಶಾಸಕರಾದ ಎಸ್.ಜಯಣ್ಣರವರಿಗೆ ಹುಟ್ಟು ಹಬ್ಬದ ಹಿನ್ನೆಲೆ
ಚಾಮರಾಜನಗರ ಜಿಲ್ಲೆ ಸಂಸದರಾದ ಸುನೀಲ್ ಬೋಸ್ ರವರಿಗೆ ಸನ್ಮಾನ ಹಾಗೂ ಉಗ್ರಾಣ ನಿಗಮದ ರಾಜ್ಯಾಧ್ಯಕ್ಷರಾದ ಎಸ್. ಜಯಣ್ಣರವರ 74 ನೇ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮವನ್ನು ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಕೊಳ್ಳೇಗಾಲ ಶಾಸಕರಾದ ಎ.ಆರ್. ಕೃಷ್ಣಮೂರ್ತಿಯವರು ಕೆ.ಪಿ ಸಿ.ಸಿ. ಉಪಾಧ್ಯಕ್ಷರಾದ. ಜಿ. ಎನ್. ನಂಜುಂಡಸ್ವಾಮಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಸಂಸದರಾದ ಸುನೀಲ್ ಬೋಸ್ ರವರು ಮಾತನಾಡಿ ಮಾಜಿ ಶಾಸಕರಾದ ಜಯಣ್ಣರವರು ನಮ್ಮ ತಂದೆಯವರ ಜೊತೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದರು ಹಾಗೂ ಅವರ ಶಾಸಕರಾಗಿದ್ದ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿಗೆ ಹೆಚ್ಚು ಅಧ್ಯತೆಯನ್ನು ಕೊಟ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ, ಚುನಾವಣೆ ಎಂದು ಮೇಲೆ ಸೋಲು ಗೆಲುವು ಸಹಜ, ಯಾರೇ ಗೆಲ್ಲಲಿ ಸೋಲಲಿ ಸಾರ್ವಜನಿಕರಿಗಾಗಲಿ ಕಾರ್ಯಕರ್ತರಿಗಾಗಲಿ ಉತ್ತಮ ಕೆಲಸವನ್ನು ಮಾಡಿ ಜನರ ಮನಸಿನಲ್ಲಿ ಸ್ಥಾನವನ್ನು ಪಡೆಯಬೇಕು ಯಾರೋ ಗೆದ್ದು ಬಂದವರು ಅವಧಿ ಇರುವವರೆಗೂ ಅಲ್ಪಸ್ವಲ್ಪ ಕೆಲಸ ಮಾಡಿ ಸೋತ ನಂತರ ಜನರನ್ನು ಮರೆಯುವ ಕೆಲಸವಾಗಬಾರದು ಸೋತಾಗಲೂ ಕೂಡಾ ಜನರ ಮದ್ಯ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಆಗಲೇ ಜನರ ಮನಸಿನಲ್ಲಿ ಉಳಿಯಲು ಸಾಧ್ಯ ಜಯಣ್ಣರವರು ತಮ್ಮಲ್ಲಿರುವ ತಾಳ್ಮೆ ತ್ಯಾಗ ಭಾವನೆಯಿಂದ ಜನಪ್ರಿಯತೆಯನ್ನು ಗಳಿಸಿದ್ದಾರೆ, ನಾನು ಮೊದಲ ಬಾರಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ ಮೇಲೆ ನನ್ನ ಗೆಲುವಿಗೆ ಜಯಣ್ಣನವರು ಎ. ಆರ್. ಕೃಷ್ಣಮೂರ್ತಿಯವರು ಪರಿಶ್ರಮ ಬಹಳವಾಗಿದೆ.
ಚಾಮರಾಜನಗರ ಜಿಲ್ಲೆಗೆ ನಾನು ಹೊಸಬ ಆದರೂ ಕೂಡ ನಿಮ್ಮೆಲ್ಲರ ಆಶೀರ್ವಾದ ಸಹಕಾರದಿಂದ ನಾನು ಸಂಸದನಾಗಿ ಆಯ್ಕೆಯಾಗಿದ್ದೇನೆ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಆಗಬೇಕಿದೆ ಪಕ್ಷದ ಎಲ್ಲಾ ಹಿರಿಯರ ಸಹಕಾರ ಮಾರ್ಗದರ್ಶನವನ್ನು ಪಡೆದು ಜಿಲ್ಲೆಯ ಅಭಿವೃದ್ಧಿಗಾಗಿ ದುಡಿಯುತ್ತೇನೆ ನೀವು ಕೊಟ್ಟಂತ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೆ ನಿಮ್ಮೆಲ್ಲರ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇನೆ ಎಂದರು.

ನಂತರ ಶಾಸಕ ಎ.ಆರ್. ಕೃಷ್ಣಮೂರ್ತಿಯವರು ಮಾತನಾಡಿ, ಜಯಣ್ಣ ಮತ್ತು ನಮ್ಮದು ಅವಿನಾಭಾವ ಸಂಬಂಧ, ನಾನು ಅವರನ್ನು ಪ್ರೀತಿಯಿಂದ ಬಿಗ್ ಬ್ರದರ್ ಎಂದೇ ಕರೆಯುತ್ತೇನೆ, ಯಾಕೆಂದರೆ ಒಂದು ಓಟಿನಿಂದ ಸೋತು 19 ವರ್ಷ ವನವಾಸ ಮಾಡಿದ್ದ ನನಗೆ ಪಕ್ಷದ ವರಿಷ್ಟ ಆಶೀರ್ವಾದ ಜಯಣ್ಣರವರ ಮತ್ತು ಪಕ್ಷದ ಕಾರ್ಯಕರ್ತರ ಸಹಕಾರದಿಂದ ದೊಡ್ಡ ಮಟ್ಟದಲ್ಲಿ ಗೆಲುವನ್ನು ಪಡೆದು ಶಾಸಕನಾಗಿ ಆಯ್ಕೆಯಾಗಿದ್ದೇನೆ, 2023 ರ ಚುನಾವಣೆಗೆ ಕೊಳ್ಳೇಗಾಲ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಉಂಟಾಗಿದ್ದು ಪಕ್ಷದ ಹಿರಿಯ ನಾಯಕರ ಅಂತಿಮವಾಗಿ ಜಯಣ್ಣರವರಿಗೆ ಉತ್ತಮ ಸ್ಥಾನಮಾನವನ್ನು ಕೊಡುವುದಾಗಿ ತೀರ್ಮಾನಿಸಿ ನನಗೆ ಅಭ್ಯರ್ಥಿಯಾಗಿ ಟೆಕೆಟ್ ಕೊಟ್ಟ ಮೇಲೆ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಂತೆ ಸೂಚನೆಯನ್ನು ಕೊಟ್ಟ ಮೇಲೆ ಮಾತಿಗೆ ಬದ್ಧರಾಗಿ ಜಯಣ್ಣರವರು ಜಿ ಎನ್. ನಂಜುಂಡ ಸ್ವಾಮಿಯವರು ಹಾಗೂ ಪಕ್ಷದ ಕಾರ್ಯಕರ್ತರುಗಳು ಅತ್ಯಂತ ಪರಿಶ್ರಮ ವಹಿಸಿ 1 ಲಕ್ಷದ 56 ಸಾವಿರ ಮಾತಗಲ್ಲಿಂದ ಗೆಲ್ಲಿಸಿದ್ದಾರೆ ಅವರಿಗೆ ನಾನು ಕೃತಜ್ಞನಾಗಿರುತ್ತೇನೆ, ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಳನ್ನು ಮಾಡಬೇಕಾದರೆ ಜಯಣ್ಣರವರ ಜೊತೆ ಚರ್ಚಿಸಿ ತೀರ್ಮಾನವನ್ನು ಕೈಗೊಳ್ಳುತ್ತೇನೆ ಎಂದು ಎಲ್ಲಾ ಕಾರ್ಯಕರ್ತ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡುತ್ತೇನೆ ಎಂದರು.

ಅನಂತರ ಜಿ. ಎನ್. ನಂಜುಂಡಸ್ವಾಮಿಯವರು ಮಾತನಾಡಿ ಮಾಜಿ ಶಾಸಕಾರದ ಎಸ್. ಜಯಣ್ಣರವರ ಸೇವೆ ಕೊಳ್ಳೇಗಾಲ ಕ್ಷೇತ್ರಕ್ಕೆ ಅಪಾರವಾದದ್ದು ವರ ಒಡನಾಟ ಸುಮಾರು 1984ರ ಇಸವಿಯಿಂದ ಇದೆ , ಕೊಳ್ಳೇಗಾಲದಲ್ಲಿ ಹಲವಾರು ನಾಯಕರು ಸಮಾಜಕ್ಕಾಗಿ ಹೋರಾಟಗಳನ್ನು ಮಾಡಿದ್ದಾರೆ ಅವರಲ್ಲಿ ಜಯಣ್ಣ ಕೂಡ ಒಬ್ಬರು, ಧೀಮಂತ ನಾಯಕರಾದ ದಿ.ಶಿವಲಂಕಾರಯ್ಯ, ದಿ. ದೊರೆರಾಜು , ಹಾಗೂ ಮತ್ತೊಬ್ಬ ದೀನದಲಿತರ ಧೀಮಂತ ನಾಯಕ ಬಸವಲಿಂಗಪ್ಪ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ದಿ. ಕೃಷ್ಣಸ್ವಾಮಿಯವರು,ಇವರ ಹೋರಾಟ ಬಹಳ ಪ್ರಾಮುಖ್ಯತೆಯನ್ನು ಹೊಂದಿದ್ದೆ ಹನೂರು ತಾಲ್ಲೂಕು ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಯಾವ ಗ್ರಾಮಗಳಲ್ಲೆ ಆದರೂ ಬಡವರಿಗೆ ಅನ್ಯಾಯವಾದರೆ ಅವರ ಪರವಾಗಿ ಧ್ವನಿ ಎತ್ತುತ್ತಿದ್ದವರು ನಾನು ಕೂಡ ಇವರ ಜೊತೆ ಹಲವಾರು ಹೋರಾಟಗಳನ್ನು ಮಾಡಿ ಜನರ ಮದ್ಯ ಗುರುತಿಸಿಕೊಂಡಿದ್ದೇನೆ. ಜಯಣ್ಣರವರು ಶಾಸಕರಾಗಿ ಆಯ್ಕೆಯಾದ ಮೇಲೆ ಕೊಳ್ಳೇಗಾಲದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ನಡೆಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್ ಗಳನ್ನು ಪ್ರಾರಂಭಿಸಿದ್ದಾರೆ, ಕೆಎಸ್. ಆರ್ ಟಿಸಿ ಡಿಪೋ, ಸರ್ಕಾರಿ ಆಸ್ಪತ್ರೆ, ರಸ್ತೆ ಅಭಿವೃದ್ಧಿ ಈಗೆ ಇನ್ನು ಕುಡಿಯುವ ನೀರಿನ ಸೌಲಭ್ಯ ಕೂಡ ಜಯಣ್ಣರವರ ಕಾಲದಲ್ಲಿ ಆಗಿದ್ದು ನಾವು ಸ್ಮರಿಸಬೇಕು ನಂತರ ದಿನಗಳಲ್ಲಿ ನಾನು ಕೂಡ ಶಾಸಕರಾಗಿ ಆಯ್ಕೆ ಅದ ಮೇಲೆ ಜಯಣ್ಣರವರಿಗೆ ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. ಜಯಣ್ಣರವರಿಗೆ ಅಜಾತ ಶತ್ರು ಯಾರ. ಮೇಲು ಕೂಡ ಮನಸ್ತಾಪವನ್ನು ಮಾಡಿಕೊಳ್ಳದೆ ಎಲ್ಲರಲ್ಲೂ ಉತ್ತಮ ಬಾಂದವ್ಯವನ್ನು ಇಟ್ಟುಕೊಂಡು ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದ್ದಾರೆ
ಈ ದಿನ ಅಭಿಮಾನಿಗಳ ವತಿಯಿಂದ ಜಯಣ್ಣರವರ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ಸಂತಸವನ್ನು ತಂದಿದೆ ಎಂದರು

ಈ ಸಂದರ್ಭದಲ್ಲಿ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ, .ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ. ಪಿ. ಶಂಕರ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ರಮೇಶ್, ನಾಗರಾಜು, ಮಂಜುನಾಥ್, ಶಾಂತರಾಜು ಹಾಗೂ ಇನ್ನಿತರರು ಇದ್ದರು.

ವರದಿ :ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ