ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಗೌಡ್ರು ಓಣಿವಾಸಿಗಳು, ಹಾಗೂ ಜಂಗಮ ಸಮುದಾಯದ ಹಿರಿಯ ನಾಗರೀಕರು ನಿವೃತ್ತ ಶಿಕ್ಷಕರಾದ ಕೆ.ಎಮ್.ಚನ್ನಬಸಯ್ಯ(91)ರವರು. ಸೆ10ರಂದು ಬೆಳಿನ ಜಾವ, ಅವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಬಹುದಿನಗಳಿಂದ, ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದರು. ಮೃತರು ಶಿಕ್ಷಕರಾಗಿ ಕೆಲ ದಶಕಗಳ ಕಾಲ ಸೇವೆಸಲ್ಲಿಸಿದ್ದು, ಜೊತೆಗೆ ಪಂಚಾಂಗ ಜ್ಯೋತೀಷ್ಯ ಶಾಸ್ತ್ರದಲ್ಲಿ ಪರಿಣಿತಿ ಹೊಂದಿದ್ದರು. ಅವರು ಪುತ್ರರು ಪುತ್ರಿಯರು ಅಪಾರ ಬಂಧು ಬಳಗವನ್ನು, ಅಸಂಖ್ಯಾತ ಶಿಷ್ಯವರ್ಗವನ್ನು ಹೊಂದಿದವರಾಗಿದ್ದರು.
ಅಂತ್ಯಕ್ರಿಯೆ-ಮೃತರ ಅಂತ್ಯಕ್ರಿಯೆ ಸೆ10ರಂದು ಮದ್ಯಾಹ್ನ3ಗಂಟೆಗೆ, ರುದ್ರಭೂಮಿಯಲ್ಲಿ ಜರುಗಿಸಲಾಗುವುದು.
ಸಂತಾಪ-ಇಹಲೋಕ ತ್ಯಜಿಸಿದ ಕೆ.ಎಮ್.ಚನ್ನಬಸಯ್ಯರವರ ಅಗಲಿಗೆ, ಜಂಗಮ ಸಮಾಜದವರು ಹಾಗೂ ವೀರಶೈವ ಸಮಾಜದವರು ಸೇರಿದಂತೆ, ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದ ಸಮಾಜದವರು ಸಂತಾಪ ವ್ಯಕ್ತಪಡಿಸಿದ್ದಾರೆ. ವಿವಿದ ಸಂಘ ಸಂಸ್ಥೆಗಳು ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಹಾಗೂ ಪಪಂ ಸರ್ವ ಸದಸ್ಯರು. ವಿವಿದ ಪಕ್ಷಗಳ ಮುಖಂಡರು, ವಿವಿದ ಜನ ಪ್ರತಿನಿಧಿಗಳು, ಸಮಾಜ ಸೇವಕರು, ಹೋರಾಟಗಾರರು, ಪತ್ರಕರ್ತರು, ಕಾರ್ಮಿಕರು ರೈತರು ಮಹಿಳೆಯರು. ನಿವೃತ್ತ ನೌಕರರು, ನಾಗರೀಕರು, ಗಣ್ಯಮಾನ್ಯರು. ಅಸಂಖ್ಯಾತ ಶಿಷ್ಯ ವರ್ಗದವರು ಸಂತಾಪ ಸೂಚಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.