ಪಾವಗಡ : ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ ವಿದ್ಯಾರ್ಥಿಗಳು ಓದಿನ ಜೊತೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ಸಹ ಕಲಿಯಬೇಕು ಎಂದು ಪಟ್ಟಣದ ಶ್ರೀ ವೆಂಕಟೇಶ್ವರ ಆಂಗ್ಲ ಶಾಲೆಯ ಖಜಾಂಚಿ ಪರಂದಾಮ ರೆಡ್ಡಿ ತಿಳಿಸಿದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ 2024-25 ನೇ ಸಾಲಿನ ಕಸಬಾ ಹೋಬಳಿಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಶ್ರೀ ವೆಂಕಟೇಶ್ವರ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಹೋಬಳಿ ಮಟ್ಟದಲ್ಲಿ ವಿಜೇತರಾಗಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಗೌತಮ್ ರಾಜ್ ಪ್ರಥಮ ಸ್ಥಾನ, ಸಾಯಿನಾಥ್ ರೆಡ್ಡಿ ದ್ವಿತೀಯ ಸ್ಥಾನ,200 ಮೀಟರ್ ಬಾಲಕರ ಓಟದ ಸ್ಪರ್ಧೆಯಲ್ಲಿ ಸಾಯಿನಾಥ ರೆಡ್ಡಿ ಪ್ರಥಮ,
ಬಾಲಕರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಅಶೋಕ್ ದ್ವಿತೀಯ ಸ್ಥಾನ,ಬಾಲಕಿಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಸನ್ನಿಧಿ ಪ್ರಥಮ ಸ್ಥಾನ, ಬಾಲಕರ ವಿಭಾಗದ ರಿಲೇಯಲ್ಲಿ ಸಾಯಿನಾಥ ರೆಡ್ಡಿ ಚರಣ್ ಅಶೋಕ್ ಗೌತಮ್ ರಾಜ್ ಪ್ರಥಮ ಸ್ಥಾನ ಗಳಿಸಿದ್ದಾರೆ.
ಖೋ ಖೋ ಸ್ಪರ್ಧೆಯಲ್ಲಿ ಅಶೋಕ್, ಲಲಿತ್ ಕಿರಣ್, ಗೌತಮ್ ರಾಜ್, ಹರ್ಷವರ್ಧನ್, ಚರಣ್, ರೇವಂತ್, ಮೋಹಿತ್ ರಾಮ್, ಲೋಕೇಶ್ ನಿತಿನ್ ರೆಡ್ಡಿ, ನಿತಿನ್ ಸಾಯಿ, ಸಾಯಿನಾಥ ರೆಡ್ಡಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಬಾಲಕರ ಕಬ್ಬಡಿ ಪಂದ್ಯದಲ್ಲಿ ಸಾಯಿನಾಥ್ ರೆಡ್ಡಿ ಲಲಿತ್ ಕಿರಣ್ ಅಶೋಕ್ ಗೌತಮ್ ರಾಜ್ ಚರಣ್ ರೇವಂತ್ ಗುಣಶೇಖರ್ ಪ್ರಥಮ ಸ್ಥಾನ ಗಳಿಸಿದ್ದು.
ಕ್ರೀಡೆಯಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಕರಾದ ಸುರೇಶ್ ಮತ್ತು ವಿನೋದ್ ರವರಿಗೆ ಶಾಲೆಯ ಖಜಾಂಚಿ ಪರಂದಾಮ ರೆಡ್ಡಿ ಮತ್ತು ಮುಖ್ಯ ಶಿಕ್ಷಕ ಸೋಮಶೇಖರ್ ಅಭಿನಂದಿಸಿದರು.
ವರದಿ ಪಾವಗಡ.ಕೆ.ಮಾರುತಿ ಮುರಳಿ