ವಿಜಯಪುರ: ಶ್ರೀ ಗಣೇಶ ಚತುರ್ಥಿಯ ನಿಮಿತ್ಯ ಶಂಕರ್ ಲಿಂಗ ದೇವಸ್ಥಾನದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು, ಸಂಧಿವಾತ, ಅರ್ಥೈಟಿಸ್ ಸಮಸ್ಯೆಯನ್ನು ಉಚಿತವಾಗಿ ತಪಾಸಣೆ ಮಾಡಿ ಔಷಧಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು ವಿಜಯಪುರದ ಖ್ಯಾತ ವೈದ್ಯರಾದ ಡಾಕ್ಟರ್ ರೇವಣೇಶ್ ಮಿರ್ಜಿ ಸಂಧಿವಾತ ಅರ್ತೈಟಿಸ್ ರಿಮೋಟಾಲಾಜಿ ಸೆಂಟರ್ ತಂಡದ ವತಿಯಿಂದ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು, ಈ ಸಂದರ್ಭದಲ್ಲಿ ಡಾಕ್ಟರ್ ರೇವಣೇಶ್ ಮಿರ್ಜಿ ಮಾತನಾಡಿ ಸಂಧಿವಾದದಲ್ಲಿ ನೂರಕ್ಕೂ ಹೆಚ್ಚು ವಿಭಿನ್ನ ಸಂಧಿವಾತಗಳು ಇವೆ, ಮುಖ್ಯವಾಗಿ ಅಸ್ತಿ ಸಂಧಿವಾತ ಬಹಳಷ್ಟು ಜನರಿಗೆ ವಯಸ್ಸಿ ನಂತರ ಕಾಣುವುದು ಅಸ್ತಿ ಸಂಧಿವಾತ, ರೋಮೊಟೈಡ್ ಅರ್ಥೈರಿಟಿಸ್ ಸಂಧಿವಾದ ಹೆಚ್ಚಿನ ಜನರಿಗೆ 30 ರಿಂದ 50 ವರ್ಷದ ಆಸುಪಾಸಿನಲ್ಲಿ ಕಂಡು ಬರುವ ಸಂಧಿವಾತ ಇದಾಗಿದ್ದು, ಈ ಸಂಧಿವಾತದ ಮುಖ್ಯ ಲಕ್ಷಣಗಳು ಕೀಲುಗಳಲ್ಲಿ ಬಾವು ಬರುವುದು, ಬೆಳಿಗ್ಗೆ ಎದ್ದ ತಕ್ಷಣ ಬಿಗಿತದ ಭಾವನೆ, ಕೀಲುಗಳಲ್ಲಿ ನೋವು ಕಾಣುತ್ತಿದೆ, ಈ ಕಾಯಿಲೆಯೂ ಅನುವಂಶಿಕವಾಗಿ ಬರುವ ಖಾಯಿಲೆಯಾಗಿದ್ದು ಜೊತೆಗೆ ಧೂಮಪಾನ ಸೇವನೆ, ವಾಯು ಮಾಲಿನ್ಯದಿಂದ, ಈ ಕಾಯಿಲೆಗಳು ಬರುವ ಸಂಭವವಿರುತ್ತದೆ, ಈ ಕಾಯಿಲೆಗಳನ್ನು ತಡೆಗಟ್ಟಲು ಸರಿಯಾದ ಸಮಯಕ್ಕೆ ಸೂಕ್ತ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು , ಇದರ ಜೊತೆಗೆ ದಿನನಿತ್ಯ ವಾಕಿಂಗ್, ಯೋಗಾಸನ, ಪೌಷ್ಟಿಕ ಆಹಾರ ಸೇವನೆ, ತೂಕ ಇಳಿಕೆಯಿಂದ ಈ ಕಾಯಿಲೆಗಳನ್ನು ಕೂಡ ತಡೆಗಟ್ಟಬಹುದು, ಸರಿಯಾದ ಸೂಕ್ತ ಸಮಯಕ್ಕೆ ಖ್ಯಾತ ವೈದ್ಯ ತಜ್ಞರಿಂದ ಚಿಕಿತ್ಸೆ ಪಡೆದರೆ, ಶಸ್ತ್ರಚಿಕಿತ್ಸೆಯಿಂದ ಪಾರಾಗಬಹುದು ಎಂದು ತಿಳಿಸಿದರು, ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಂಕರಲಿಂಗ ಬಣಗಾರ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಮಹೇಶ್ ಹೇರಲಗಿ ಮಾತನಾಡಿ ಮಂಡಳಿಯ ಸದಸ್ಯರು ಪ್ರತಿ ವರ್ಷ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದರಿಂದ ಅನೇಕ ಬಡ ಜನರಿಗೆ ಅನುಕೂಲವಾಗಿದೆ ಸದಸ್ಯರು ಸಮಾಜಮುಖಿಯ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು, ಇನ್ನೋರ್ವ ಹಿರಿಯರಾದ ಶ್ರೀ ಪವಾಡಪ್ಪ ಗಿಡವೀರ್ ಮಾತನಾಡಿ ಗಜಾನನ ಮಂಡಳಿಯ ಸದಸ್ಯರು ಗಣೇಶ ಚತುರ್ಥಿಯ ಅಂಗವಾಗಿ ಏಳು ದಿನಗಳ ಕಾಲ ಪ್ರತಿನಿತ್ಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ರತಿಭಾ ಪುರಸ್ಕಾರ, ಎಸ್‍ಎಸ್‍ಎಲ್‍ಸಿ, ಪಿಯುಸಿ,ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸನ್ಮಾನ, ಉಚಿತ ನೇತ್ರ ತಪಾಸಣೆ ಉಚಿತ ಕನ್ನಡಕ ವಿತರಣೆ ಈ ರೀತಿ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಮಾದರಿ ಗಜಾನನ ಮಂಡಳಿಯಾಗಿ ಕೆಲಸ ಮಾಡುತ್ತಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು, ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಶ್ರೀ ಶಂಕರಲಿಂಗ ಗಜಾನನ ಮಂಡಳಿಯ ಅಧ್ಯಕ್ಷರಾದ ಆಶಿಶ್ ಹುಣಶ್ಯಾಳ, ಉದ್ಯಮಿದಾರರಾದ ಅಪ್ಪು ಹೇರಲಗಿ ,ರಮಾಕಾಂತ್ ಲೋಣಿ, ಉಪಸ್ಥಿತರಿದ್ದರು ದಾನಪ್ಪ ಕುರ್ಲೆ ನಿರೂಪಿಸಿದರು, ಮಹೇಶ್ ಕುರ್ಲೆ ವಂದಿಸಿದರು ನೂರಾರು ಜನರು ಈ ಆರೋಗ್ಯ ಶಿಬಿರದ ಲಾಭವನ್ನು ಪಡೆದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.