ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಮಹಿಳಾ ಗ್ರಾಮ ಸಭೆಯಲ್ಲಿ ಆಡಳಿತ ಅಧಿಕಾರ ರಾಜಣ್ಣ ಮಾತನಾಡಿ ಒಂದು ಗ್ರಾಮದಲ್ಲಿ ಪುರುಷರು ಹೇಗೆ ಭಾಗಿ ಆಗಿ ಅಭಿವೃದ್ಧಿಗೆ ಒತ್ತು ಕೊಡುತ್ತಾರೋ ಹಾಗೆಯೇ ಮಹಿಳಾ ಸಿಬ್ಬಂದಿಗಳು ಪಂಚಾಯತಿಯ ಅಭಿವೃದ್ಧಿಗೆ ಕೈ ಜೋಡಿಸಿದರೆ ಮಾತ್ರ ಆ ಗ್ರಾಮ ಅಭಿವೃದ್ಧಿಯಾಗಲು ಸಾಧ್ಯ ಹಾಗಾಗಿ ಮಹಿಳೆಯರು ಇಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸಹ ಗಂಡಿಗೆ ಸಮವಾಗಿ ಬೆಳೆದಿದ್ದು ಈ ಗ್ರಾಮದಲ್ಲೂ ಸಹ ಮಹಿಳೆಯರು ಸಾಮಾಜಿಕ ಹಾಗೂ ಆರ್ಥಿಕವಾಗಿ ಮುಂದೆಬರಬೇಕು ಹಾಗೂ ಗರಂಭಿವೃಢಿಗೆ ಕೈ ಜೋಡಿಸಬೇಕು ಎಂದರು.
ಹನೂರು ತಾಲೂಕು ವೈದ್ಯಾಧಿಕಾರಿಗಳಾದ ಪ್ರಕಾಶ್ ಮಾತನಾಡಿ ಆರೋಗ್ಯ ಜಾಗೃತಿ ಅರಿವು ಮಹಿಳೆಯರು ಹಾಗೂ ಮಕ್ಕಳ ಆರೋಗ್ಯ ಗ್ರಾಮದ ಸ್ವಚ್ಛತೆ ಮುಂತಾದವುಗಳ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ ರಾಜಣ್ಣ,ತಾಲೂಕು ಪಂಚಾಯಿತಿ ಮ್ಯಾನೇಜರ್ ರಮೇಶ್,ತಾಲೂಕು ಮಟ್ಟದ ಅಧಿಕಾರಿಗಳು,ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಖಾ ಬಾಲಕೃಷ್ಣ,ರಾಜು ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು,ಪಂಚಾಯ್ತಿ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಇದ್ದರು.
ವರದಿ :ಉಸ್ಮಾನ್ ಖಾನ್