ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರಸಭೆಯಲ್ಲಿ ಫಾರಂ 3 ಕೊಡೋದಕ್ಕೆ ವರ್ಷಗಟ್ಟಲೇ ಸಮಯ ತೆಗೆದುಕೊಳ್ಳುತ್ತಿದ್ದಾರೆ ಇಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗುತ್ತೆ ಇಲ್ಲ ಅಂದ್ರೆ ಆಗಲ್ಲ ಒಬ್ಬ ಜನ ಸಾಮಾನ್ಯ ವ್ಯಕ್ತಿ ಫಾರಂ 3 ಗೆ ಅಪ್ಲೈ ಮಾಡಿದಲ್ಲಿ ಅವರ ಕೆಲಸ ಆಗಲ್ಲ ದಿನಾಲೂ ಮುನ್ಸಿಪಾಲಿಟಿ ಮೆಟ್ಟಲು ಹತ್ತಿ ಇಳಿದು ಇಲ್ಲಿ ಜನರು ಬೇಸತ್ತಿದ್ದಾರೆ ಯಾರಾದ್ರೂ ಹೋಗಿ ಕೇಳಿದ್ರೆ ಏನೋ ಒಂದು ದಾಖಲೆ ಕೇಳುತ್ತಾರೆ ಅದನ್ನು ತಂದು ಕೊಟ್ರೆ ದಿನಾಲು ಸರ್ವರ್ ಇಲ್ಲ ,ಲಾಗಿನ್ ಅಲ್ಲಿದೆ ಸಾರ್ ಬಂದಿಲ್ಲ, ನಾಳೆ ಕೊಡುತ್ತೀನಿ ಕರೆಂಟ್ ಇಲ್ಲ ಈ ತರಹ 108 ಕಾರಣ ಹೇಳಿ ವರ್ಷಗಳು ಕಳೆದರೂ ಫಾರಂ 3 ಕೊಡುತ್ತಿಲ್ಲ ಆದ್ರೆ ಲಂಚ ಕೊಟ್ರೆ ಮಾತ್ರ ಇಲ್ಲಿ ಕೆಲಸ ಆಗುತ್ತೆ ಒಬ್ಬ ಬಡ ವ್ಯಕ್ತಿ ಲಂಚ ಎಲ್ಲಿಂದ ಕೊಡೋದು ಯಾರಾದ್ರೂ ಒಬ್ಬ ವ್ಯಕ್ತಿ ಬಂದು ಜೋರಾಗಿ ಮಾತಾಡಿ ಇನ್ನು ಎಷ್ಟು ದಿನ ಮಾಡ್ತೀರಿ ಅಂತ ಕೇಳಿದ್ರೆ ಏನಾದ್ರೂ ದಾಖಲೆ ಕೇಳ್ತಾರೆ ಇಲ್ಲ ಲಿಂಕ್ ಡಾಕ್ಯುಮೆಂಟ್ ಇಲ್ಲ ಅಂತ ಉತ್ತರ ಕೊಡುತ್ತಾರೆ ದಾಖಲೆ ಇಲ್ಲ ಅಂದ್ರೆ ಅದನ್ನು ಅವರು ನೊಟೀಸ್ ಮೂಲಕ ಕೇಳ್ಬೇಕು ನೊಟೀಸ್ ಮೂಲಕ ಕೇಳೋ ಒಂದು ಕೆಲ್ಸನೂ ಇಲ್ಲಿಯ ಸಿಬ್ಬಂದಿಗಳಿಂದ ಆಗುತ್ತಿಲ್ಲ ಈ ವಿಷಯವನ್ನು ಮೇಲಾಧಿಕಾರಿಗಳು ಕೂಡಲೇ ಸರಿ ಮಾಡಬೇಕು ಅಂತ ಸಾಮಾನ್ಯ ಜನರು ವಿನಂತಿಸಿದ್ದಾರೆ.
ಒಬ್ಬ ವ್ಯಕ್ತಿ RTI ಹಾಕಿದ್ರೂ ಆ RTI ಗೂ ಉತ್ತರ ಕೊಡುತ್ತಿಲ್ಲ ಅಂದ್ರೆ ಇಲ್ಲಿಯ ಪರಿಸ್ಥಿತಿ ಎಷ್ಟೊಂದು ಹದಗೆಟ್ಟಿದೆ ಅಂತ ಗೊತ್ತಾಗುತ್ತೆ ಮುಖ್ಯವಾಗಿ ಮುನಿಸಿಪಾಲಿಟಿ ಕಮಿಷನರ್ ನ ಕಾರಣಕ್ಕೆ ಫೈಲ್ ರಿಜೆಕ್ಟ್ ಮಾಡುತ್ತಿದ್ದಾರೆ ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಇನ್ನು ಮುಂದೆ ಇತರ ಆಗದೆ ಇರೋ ತರ ನೋಡಿ ಕೊಳ್ಳಬೇಕೆಂದು ಜನ ಸಾಮಾನ್ಯರು ವಿನಂತಿಸಿದ್ದಾರೆ.
ವರದಿ ಎಸ್.ಏ.ನಿಜಾಮ್