ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸ್ವಸ್ಥ ಬಾಳಿಗೆ ಫಿಸಿಯೋಥೆರಪಿ ದೀವಿಗೆ: ಡಾ.ಚಿಂತಾಮಣಿ

ಬೆಂಗಳೂರು :ಖ್ಯಾತ ಸಾಹಿತಿ, ಕವಿ, ವಿದ್ವಾಂಸ, ಡಾ.ಚಿಂತಾಮಣಿ ಕೊಡ್ಲೆಯಕೆರೆ ಇವರು ಇತ್ತೀಚೆಗೆ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಜರುಗಿದ ಆರೋಗ್ಯ ಸಲಹೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಯೊಬ್ಬರಿಗೂ ತಾವು ನೆಮ್ಮದಿಯಿಂದ ಇರಬೇಕು; ಸಂತೋಷವಾಗಿರಬೇಕು; ಆರೋಗ್ಯದಿಂದಿರಬೇಕು; ಎಂಬುದು ಸಹಜವಾಗಿಯೇ ಇರುತ್ತದೆ ಎಂದು, ಈ ಸಂದರ್ಭದಲ್ಲಿ ಆರೋಗ್ಯ ಸಲಹೆ ನೀಡಲು ಆಗಮಿಸಿದ ಖ್ಯಾತ ಪಿಸಿಯೋಥೆರಪಿಸ್ಟ್ ಡಾಕ್ಟರ್ ನವೀನ್ ಅವರ ವಿಶೇಷತೆಯನ್ನು ಹೊಗಳಿ, ನೆಮ್ಮದಿಯ ಬದುಕು ಬದುಕಲು ಅನುಕೂಲವಾಗುವಂತ ಫಿಜಿಯೋಥೆರಪಿ ಕುರಿತ ಆರೋಗ್ಯ ಸಲಹೆಯನ್ನು ಪಾಲಿಸಬೇಕೆಂದು ಸಭಿಕರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯ ಸಲಹೆ ನೀಡಲು ಆಗಮಿಸಿರುವ ಡಾಕ್ಟರ್ ನವೀನ್ ಅವರು ಹಲವಾರು ಆಯಾಮಗಳನ್ನು ಒಳಗೊಂಡಿರುವ ಫಿಜಿಯೋಥೆರಪಿ ಕುರಿತು ವಿವರವಾಗಿ ತಿಳಿಸಿ,ನಮ್ಮ ದೈನಂದಿನ ಕಾರ್ಯ ಚಟುವಟಿಕೆಗಳನ್ನು ನಡೆಸಲು, ಸ್ವಾಸ್ಥ್ಯ ಕಾಪಾಡಲು ದೇವರು ಅತಿ ವೈಶಿಷ್ಟ್ಯ ಪೂರ್ಣ ದೇಹರಚನೆ ಮಾಡಿದ್ದು ಅತ್ಯಂತ ಸೋಜಿಗ ಎಂದು ಹೇಳಿ, ಅನೇಕ ನೋವು ತಾಪಗಳಿಗೆ ಸರಳ ಉಪಾಯ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿ ಸಭಿಕರ ಅನೇಕ ಸಂದೇಹಗಳಿಗೆ ಪರಿಹಾರ ತಿಳಿಸಿದರು. ಅವರ ಸಲಹೆಯನ್ನು ಪಡೆದ ಸಭಿಕರು ಧನ್ಯತೆ ಭಾವವನ್ನು ಹೊಂದಿದರು. ಈ ಸಂದರ್ಭದಲ್ಲಿ ಜನಪ್ರಿಯ ಕಥೆಗಾರ 25 ಕ್ಕೂ ಹೆಚ್ಚು ಕೃತಿ ರಚನೆ ಮಾಡಿರುವ ಹಿರಿಯ ಸಾಹಿತಿ ಸತ್ಯಬೋಧ ಅವರನ್ನು ಸನ್ಮಾನಿಸಲಾಯಿತು. ತಾವು ನಿವೃತ್ತಿಯ ನಂತರ ಸಾಹಿತ್ಯ ದಲ್ಲಿ ತೊಡಗಿಕೊ0ಡಿರುವದನ್ನು, ತಮ್ಮ ಸಾಹಿತ್ಯಾನುಭವ ಹಂಚಿಕೊಂಡು, ಸನ್ಮಾನಿಸಿರುವದಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕವಿಪ್ರನಿನಿ ನಿವೃತ್ತ ನಿಯಂತ್ರಣ ಅಧಿಕಾರಿ (ಹಣಕಾಸು), ಸುಮಧುರ ಗಾಯಕ ಶ್ರೀ ನರಸಿಂಹ ಭಟ್ ಅವರು ಸುಶ್ರಾವ್ಯವಾಗಿ ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು. ಉಗಾಭೋಗ, ಪುರಂದರ ದಾಸರ, ಕನಕ ದಾಸರ, ವಿಜಯದಾಸರ, ವಾದಿರಾಜರ ಅನೇಕ ಕೃತಿಗಳನ್ನು, ದೇವರನಾಮ ಗಳನ್ನು ಹಾಡಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು.
ಅವರಿಗೆ ಹಾರ್ಮೋನಿಯಂ ನಲ್ಲಿ ಸುರೇಶ್ ಎಸ್, ತಬಲಾದಲ್ಲಿ ನಂದಮೋಹನ್ ಮತ್ತು ಶ್ರೀಹರಿ ಭಟ್ ಕೊಳಲು ಸಹಕಾರ ನೀಡಿ ಸಂಗೀತ ಕಾರ್ಯಕ್ರಮಕ್ಕೆ ಮೆರೆಗು ನೀಡಿದರು. ಶ್ರೀಮತಿ ಶ್ರೀ ವಾಣಿ ಪ್ರಾರ್ಥನೆ ಹಾಡಿದರು; ಶ್ರೀಮತಿ ಶ್ರೀದೇವಿ ಸಾಲಿಮಠ ಪ್ರಸ್ತಾವನೆ ಮಾಡಿದರೆ ಶ್ರೀಮತಿ ಇಂದಿರಾ ಪಾಂಡುರಂಗ ರಾವ್ ಅವರು ಸ್ವಾಗತ ಕೋರಿದರು. ಪ್ರಕಾಶಕಿ ವಿಶಾಲಾಕ್ಷಿ ಶರ್ಮಾ ಪರಿಸರ ಪಾಠ ಹೇಳಿ ಮಣ್ಣಿನ ಮಹತ್ವ ತಿಳಿಸಿಕೊಟ್ಟರು. ಅಂಕಣಕಾರ ಧೀರೇಂದ್ರ ನಾಗರಹಳ್ಳಿ ಹಾಗೂ ಚಿಂತಕ ಚಿಂತಾಮಣಿ ಸಭಾಹಿತ ಗಣ್ಯರ ಪರಿಚಯ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಕವಿ ಕೆ ವಿ ಲಕ್ಷ್ಮಣ ಮೂರ್ತಿ, ಡಾ.ಕಲ್ಪನಾ, ಗೌರಿ ಪಂಡಿತ, ಗೀತಾ ಸಭಾಹಿತ, ಸಂಘದ ಪ್ರಮುಖರಾದ ರಾಮಚಂದ್ರ ರೆಡ್ಡಿ ಗೋಪಾಲ, ನಾಗಿರೆಡ್ಡಿ, ಸತ್ಯನಾರಾಯಣ, ಈರಪ್ಪ, ಸುಚೇತನ ಬಿ.ವಾಸುದೇವ ಕಾರಂತ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಪೂರ್ಣಿಮಾ ಗೋಪಾಲ ಅಚ್ಚುಕಟ್ಟಾಗಿ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದ ಫೋಟೋ ಹಾಗೂ ಆಮಂತ್ರಣದ ವಿವರ ಲಗತ್ತಿಸಿದ್ದೇನೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ