ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಟಿ ಗೋಪಗೊಂಡನ ಹಳ್ಳಿಯ ನಮ್ಮ ಜಿಲ್ಲಾ ಗಡಿ ಗ್ರಾಮದ ವ್ಯಾಪ್ತಿಯಲ್ಲಿ ಸಂವಿಧಾನದ ಆಶಯಗಳನ್ನು ಸಾರುವ ಸಮಾಜದಲ್ಲಿನ ಜನತೆಗೆ ಸಂವಿಧಾನದ ಮಹತ್ವ ಸಂವಿಧಾನದ ಅವಶ್ಯಕತೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರಜಾಪ್ರಭುತ್ವದ ಪೀಠಿಕೆಯನ್ನ ಓದುವ ಮತ್ತು ಅರ್ಥೈಸಿಕೊಳ್ಳುವ ಕಾರ್ಯಕ್ರಮದಲ್ಲಿ ಶಾಸಕರಾದ ಡಿ ಜಿ ಶಾಂತನಗೌಡರು , ಶ್ರೀಹಿರೇ ಕಲ್ಮಠದ ಶ್ರೀ ಡಾಕ್ಟರ್ ಚೆನ್ನಮಲ್ಲಿಕಾರ್ಜುನ ಸ್ವಾಮಿಗಳು ಉಪವಿಭಾಗಾಧಿಕಾರಿ ಅಭಿಷೇಕ್ ವಿ,dysp ರುದ್ರಪ್ಪ ಉಜ್ಜಿನಿಕೊಪ್ಪ ನ್ಯಾಮತಿ ತಾಲ್ಲೂಕು ದಂಡಾಧಿಕಾರಿ ಗೋವಿಂದಪ್ಪ,ಡಿ ಎಚ್ ಒ ಷಣ್ಮುಖಪ್ಪ ,ಹೊನ್ನಾಳಿ ತಾಲೂಕು ದಂಡಾಧಿಕಾರಿ ಪಟ್ಟ ರಾಜೇಗೌಡ, ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಗಳು ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಶಾಸಕರು ಸಂವಿಧಾನದ ಬೋಧನೆ ಮಾಡಿದರು ಶಾಲಾ ಮಕ್ಕಳು ವಿವಿಧ ಇಲಾಖೆಯ ಅಧಿಕಾರಿಗಳು ನಾಡಗೀತೆಯನ್ನು ಹಾಡಿ ನಂತರ ಸಸಿ ನೆಡುವ ಮೂಲಕ ಮಾನವ ಸರಪಳಿ ರಚಿಸಿ ಜೈ ಹಿಂದ್ ಜೈ ಕರ್ನಾಟಕ ಮಾತೆ ಎಂದು ಘೋಷಣೆ ಕೂಗಿದರು.
ವರದಿ-ಪ್ರಭಾಕರ ಡಿ ಎಂ ಹೊನ್ನಾಳಿ