ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರ ಸ್ಪೋಟ್ಸ್ ಕ್ಲಬ್ ನ ಕೊಟ್ಟೂರಿನ ವಿದ್ಯಾರ್ಥಿನಿ ಪ್ರತೀಕ್ಷ ಕರ್ನಾಟಕ ರಾಜ್ಯ ಖೋ ಖೋ ಅಸೋಸಿಯೇಷನ್ ನಡೆಸುವ ಅಯ್ಕೆ ಪ್ರಕ್ರಿಯೆಯಲ್ಲಿ ಅಯ್ಕೆಯಾಗಿದ್ದು ಜಾರ್ಖಂಡ್ ನಲ್ಲಿ ದಿನಾಂಕ : 28-9-2024 ರಿಂದ 2-10- 2024 ರವರೆಗೆ ನಡೆಯುವ ರಾಷ್ಟ್ರ ಮಟ್ಟದ ಪಂದ್ಯಾವಳಿಯ ತರಬೇತಿ ಶಿಬರಕ್ಕೆ ಪ್ರತೀಕ್ಷ ವಿದ್ಯಾರ್ಥಿನಿ ಆಯ್ಕೆಯಾಗಿದ್ದು 14 ವರ್ಷದೊಳಗಿನ ಬಾಲಕಿಯರ ರಾಷ್ಟ್ರ ಮಟ್ಟದ ಖೋ ಖೋ ಪಂಧ್ಯಾವಳಿಗಳಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಆಯ್ಕೆಯಾದ ಏಕೈಕ ಪ್ರತಿಭೆ ನಮ್ಮ ವಿಜಯನಗರ ಜಿಲ್ಲೆಯ ಕೊಟ್ಟೂರಿನ ವಿದ್ಯಾರ್ಥಿನಿ ಪ್ರತೀಕ್ಷ ಎನ್ನುವುದು ನಮ್ಮ ಹೆಗ್ಗಳಿಕೆ ಎಂದು ಆಯ್ಕೆಯಾದ ಪ್ರತೀಕ್ಷ ವಿದ್ಯಾರ್ಥಿನಿಗೆ 2022- 2023 ಸಾಲಿನಲ್ಲಿ ನಡೆದ ರಾಜ್ಯ ಮಟ್ಟದ ನಮ್ಮ ಶ್ರೀ ಗುರು ಕೊಟ್ಟೂರೇಶ್ವರ ಸ್ಪೋಟ್ಸ್ ಕ್ಲಬ್ ಗೆ ಮಾಜಿ ಶಾಸಕರು ಮತ್ತು ಕೆ ಎಂ ಎಫ್ ಅಧ್ಯಕ್ಷರಾದ ಎಸ್ ಭೀಮನಾಯ್ಕರವರು 1,00000 ಲಕ್ಷ ರೂಪಾಯಿಗಳು ದೇಣೆಗೆ ಕೂಡ ನೀಡಿರುತ್ತಾರೆ ಎಂದು ಶ್ರೀ ಗುರು ಕೊಟ್ಟೂರೇಶ್ವರ ಸ್ಪೋಟ್ಸ್ ಕ್ಲಭ್ ನ ಅಧ್ಯಕ್ಷರಾದ ಎಂ.ಶಂಕರ್,ಕಾರ್ಯದರ್ಶಿ ಲಿಂಗನಾಯ್ಕ ರವರು ಮಾತನಾಡಿ ಮಾಜಿ ಶಾಸಕರು ಮತ್ತು ಕೆ ಎಂ ಎಫ್ ಅದ್ಯಕ್ಷರಾದ ಎಸ್ ಭೀಮನಾಯ್ಕ್ ರವರಿಗೆ ಮತ್ತು ವಿದ್ಯಾರ್ಥಿನಿ ಪ್ರತಿಕ್ಷ ರವರಿಗೆ ಅಭಿನಂದನೆ ಸಲ್ಲಿಸಿದರು.
ವಿಜಯನಗರ ಜಿಲ್ಲಾ ಖೋ ಖೋ ಸಂಸ್ಥೆಯ ಕಾರ್ಯದರ್ಶಿ ಟಿ,ಕರಿಬಸಪ್ಪ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಇಂತಹ ಪ್ರತಿಭೆಗಳು ಅನಾವರಣ ಗೊಳ್ಳಬೇಕು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭೆಗಳು ಉಜ್ವಲಿಸಬೇಕು ಅಪ್ಪಟ ಭಾರತೀಯ ಕ್ರೀಡೆ ಖೋ ಖೋ ಬೆಳಸಲು ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಸ್ಪೋಟ್ಸ್ ಕ್ಲಬ್ ನ ಸರ್ವಸದಸ್ಯರು , ವಿದ್ಯಾರ್ಥಿಗಳು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.