ಕೊಪ್ಪಳ: ನಮಗೆ 1947 ರಲ್ಲಿ ಸ್ವಾತಂತ್ರ ಸಿಕ್ಕಿದ ನಂತರ ಅದರಲ್ಲೂ 1948 ಸೆಪ್ಟೆಂಬರ್ 17 ರ ನಂತರ ಹೈದ್ರಾಬಾದ್ ಕರ್ನಾಟಕ ವಿಮೋಚನಾ ನಂತರ ಪರಿಪೂರ್ಣ ಸ್ವಾತಂತ್ರ ನಮ್ಮ ಭಾಗಕ್ಕೆ ಸಿಕ್ಕಿತು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ದಂದು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಪ್ರದೇಶವನ್ನು ಮೊದಲು ಹೈದರಾಬಾದ್ ನಿಜಾಮರು ಆಳ್ವಿಕೆ ಮಾಡುತ್ತಿದ್ದರು.
ನಮ್ಮ ಪ್ರದೇಶವನ್ನು ಹಿಂದುಳಿದ ಪ್ರದೇಶ ಎಂದು ಗುರುತಿಸಿ ಸರಕಾರವು ಅನೇಕ ಸೌಲಬ್ಯಾಗಳನ್ನು ನೀಡಿದ್ದಾರೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದೆ.
ಶಿಕ್ಷಣದಿಂದ ನಮ್ಮ ಭಾಗ ಅಭಿವೃದ್ಧಿ ಸಾಧ್ಯ ನಮ್ಮ ಭಾಗದ ಅಭಿವೃದ್ಧಿಗಾಗಿ ಎಲ್ಲರೂ ಕಠಿಣ ಪರಿಶ್ರಮ ಪಡಬೇಕು ಎಂದು ಹೇಳಿದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗವಿಸಿದ್ದಪ್ಪ ಮುತ್ತಾಳ ಮಾತನಾಡಿ ನಮಗೆ 1948 ರಲ್ಲಿ ಸ್ವಾತಂತ್ರ ಸಿಕ್ಕಿದೆ. ಇದು ತ್ಯಾಗ ಬಲಿದಾನದಿಂದ ಸಿಕ್ಕಿದೆ. ಇದಕ್ಕೆ ಮೂಲ ಕಾರಣ ವಲ್ಲಭಾಯಿ ಪಟೇಲ್ ಅವರು.ನಮ್ಮ ದೇಶದಲ್ಲಿ 520 ರಾಜರ ಸಂಸ್ಥಾನಗಳು ಇದ್ದವು. ಇವೆಲ್ಲವುನ್ನು ಅಂದಿನ ನಮ್ಮ ನಾಯಕರು ಒಗ್ಗೂಡಿಸಿದರು.
ಬ್ರಿಟಿಷರು ನಮ್ಮ ದೇಶವನ್ನು 250 ವರ್ಷಗಳು ಆಳ್ವಿಕೆ ಮಾಡಿದರು. ನಮ್ಮ ದೇಶದ ಸ್ವಾತಂತ್ರಕ್ಕಾಗಿ
ಗಾಂಧೀಜಿ ಯವರ ನಿರಂತರವಾಗಿ ಸತ್ಯಾಗ್ರಹ, ಅಸಹಕಾರ ಚಳುವಳಿ ಮಾಡಿದರು.
ಬ್ರಿಟಿಷರು 1935 ಕಾನೂನು ಅನ್ವಯ ಆಡಳಿತ ನಡೆಸಿದರು. ನಮಗಾಗಿ, ನಮ್ಮ ದೇಶಕ್ಕಾಗಿ ಜವಾಹರ್ ಲಾಲ್ ನೆಹರು, ಮಹಾತ್ಮಾ ಗಾಂಧೀಜಿ, ಸರ್ದಾರ್ ವಲ್ಲಭಾಯಿ ಪಟೇಲ್, ಡಾ. ಬಿ. ಆರ್. ಅಂಬೇಡ್ಕರ್ ಮುಂತಾದವರು ತನು, ಮನ, ಧನವನ್ನು ತ್ಯಾಗ ಮಾಡಿದ್ದಾರೆ ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಅಲವಂಡಿಯ ಶಿವಮೂರ್ತಿ ಸ್ವಾಮಿಗಳು, ಮುಂಡರಗಿ ಭೀಮರಾಯ ಇನ್ನಿತರರು ಸ್ವತಂತ್ರಕ್ಕಾಗಿ ಹೋರಾಟ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಾರದ ಶ್ರೀ ಮತಿ ನಾಗರತ್ನ ತಮ್ಮಿನಾಳ,ಶ್ರೀ ವಿಠೋಬ ಎಸ್, ಡಾ. ಹುಲಿಗೆಮ್ಮ, ಡಾ. ಮಲ್ಲಿಕಾರ್ಜುನ, ಡಾ. ಪ್ರದೀಪ್ ಕುಮಾರ್, ಡಾ. ನರಸಿಂಹ,ಡಾ. ಅಶೋಕ ಕುಮಾರ್, ಶ್ರೀ ಮತಿ ಸುಮಿತ್ರಾ, ಶ್ರೀ ಮತಿ ಸೌಮ್ಯ ಹಿರೇಮಠ, ಹನುಮಪ್ಪ, ಶ್ರೀಕಾಂತ್, ತಾರಮತಿ, ಲಕ್ಷ್ಮೀ ಎ. ಕೆ, ರುಕ್ಕಮ್ಮ, ಚಾ0ದುಬಿ, ಗವಿಸಿದ್ದಪ್ಪ ಅಜ್ಜ ಹಾಗೂ ಕಾಲೇಜಿನ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.