ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಶ್ರೀ ನೂರಂದೇಶ್ವರ ಕಲ್ಯಾಣ ಕೇಂದ್ರದ ವಿಜ್ಞಾನ ಮತ್ತು ಕಲಾ ಪದವಿ ಪೂರ್ವ ಕಾಲೇಜು ಜೇವರ್ಗಿಯಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ನಡೆಯಿತು.
ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ ಪೂಜ್ಯ ಶ್ರೀ ಮ.ನಿ.ಪ್ರ ಗುರುಲಿಂಗ ಮಹಾಸ್ವಾಮಿಗಳು ಅಧ್ಯಕ್ಷರು ಶ್ರೀ ನೂರಂದೇಶ್ವರ ಕಲ್ಯಾಣ ಕೇಂದ್ರ ಮೋರಟಗಿ ಮತ್ತು ಯಲಗೋಡ ರವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ
ಬೆಳಗಿಸುವುದರ ಮೂಲಕ ಶ್ರೀ ಮತಿ ಆರತಿ ಶ್ರೀ ಜಯಪ್ರಕಾಶ ಪಾಟೀಲ್ ನರಿಬೋಳ ರವರು ಮಾಡಿ ಉದ್ಘಾಟನೆಯ ನುಡಿಗಳಾದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ದ್ವೀತಿಯ ವರ್ಷದ ವಿದ್ಯಾರ್ಥಿಗಳು ಸ್ವಾಗತ ಕೋರುತ್ತಿರುವ ಸಂಸ್ಕಾರದ ಶಿಕ್ಷಣ ನೋಡಿ ಅತೀವ ಆನಂದ ಉಂಟಾಯಿತು ಇದೇ ರೀತಿಯಾಗಿ ಪ್ರಥಮ ವರ್ಷದ ವಿದ್ಯಾರ್ಥಿಗಳು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುವುದು ಈ ರೀತಿಯಾದ ಅಕಸ್ಮಿಕವಾಗಿ ಕೂಡುವುದು,ಅನಿವಾರ್ಯವಾಗಿ ಅಗಲುವುದು ಇವು ಪರಸ್ಪರ ವಿದ್ಯಾರ್ಥಿಗಳ ಜೀವನದಲ್ಲಿ ನಡೆಯುವುದು ನೈಸರ್ಗಿಕ ಬದಲಾವಣೆಗಳೆಂದರೆ ತಪ್ಪಾಗಲಾರದು ಹಾಗಾಗಿ ಪ್ರತಿ ವರ್ಷದಂತೆಯೇ ಈ ಶೈಕ್ಷಣಿಕ ವರ್ಷದಲ್ಲಿಯೂ ಕಷ್ಟ ಪಟ್ಟು ಅಧ್ಯಾಯನ ಮಾಡಿ ಉತ್ತಮ ಅಂಕಗಳಿಸಿ ಕಾಲೇಜಿಗೆ ಮತ್ತು ನಿಮ್ಮ ತಂದೆ-ತಾಯಿ ಹಾಗೂ ಕುಟಂಬದವರಿಗೆ ಒಳ್ಳೆಯ ಹೆಸರು ತೆಗೆದುಕೊಂಡು ಹೋಗಿ ಎಂದು ಉದ್ಘಾಟನೆಯ ನುಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಮ್ ಎಸ್ ಹಿರೇಮಠ,ಪ್ರಾಸ್ತವಿಕ ನುಡಿಗಳನ್ನಾಡಿದ ವೆಂಕಟರಾವ ಮುಜುಮದಾರ,ಮುಖ್ಯ ಅತಿಥಿಗಳಾದ ಶ್ರೀ ರಾಜೇಸಾಬ್ ನಧಾಫ್ ಸಿಪಿಐ ಜೇವರ್ಗಿ,ಶ್ರೀ ಗಜಾನಂದ ಬರಾದಾರ ಪಿಎಸ್ಐ ಜೇವರ್ಗಿ,ಶ್ರೀಮತಿ ಮೋನಮ್ಮ ಸುತಾರ,ಅಂಬವ್ವ ಪೂಜಾರಿ,ಶ್ರೀ ಶಿವಶರಣಪ್ಪ ಜೆ,ಶ್ರೀ ಬಾಪುರಾವ ಪಾಗಾ,ಶ್ರೀ ಲಿಂಗರಾಜ ಹಿರೇಗೌಡರ್ ಮತ್ತು ವಿಶೇಷ ಸನ್ಮಾನಿತರಾದ ಶ್ರೀ ಜಗದೀಶ್ ಉಕ್ಕನಾಳ,ಶ್ರೀ ಧರ್ಮಣ್ಣ ಕೆ ಬಡಿಗೇರ ಹಾಗೂ ಈ ಸಂದರ್ಭದಲ್ಲಿ ಸಂಚಾಲಕರಾದ ರಾಕೇಶ ಹರಸೂರ,ಭಾಗ್ಯಶ್ರೀ ಗಂವಾರ,ನವೀನ ಕಲಬುರಗಿ,ವಿರೇಶ ಗೋಗಿ,ಶರಣು ಸುರಪೂರ,ಹಣಮಂತ್ರಾಯ ಬಿರಾದಾರ,ಜಯಲಕ್ಮೀ ಹಳ್ಳಿ,ಪ್ರಸನ್ ಹರಸೂರ,ಗೌರಮ್ಮ ಗಂವಾರ್ , ಪಾಲಕ-ಪೋಷಕ ಬಂಧುಗಳು ಮತ್ತು ಕಾರ್ಯಕ್ರಮದ ನಿರೂಪಕರಾದ ಶ್ರೀ ನಾಗಣ್ಣ ಆಲೂರ ಹಾಗೂ ಕಾರ್ಯಕ್ರಮವನ್ನು ಹಣಮಂತ್ರಾಯ ಬಿರಾದಾರ ವಂದಿಸಿದರು.
ವರದಿ: ಚಂದ್ರಶೇಖರ ಪಾಟೀಲ್(ಗುಡೂರ ಎಸ್.ಎನ್)