ಉತ್ತರ ಕನ್ನಡ/ ಮುಂಡಗೋಡ: ಸರ್ಕಾರಿ ಪ್ರೌಢ ಶಾಲೆ ಮುಂಡಗೋಡದಲ್ಲಿ ಹತ್ತನೆಯ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಕಿರು ಪರೀಕ್ಷೆಗಳಲ್ಲಿ ಯಾವ ಯಾವ ವಿಷಯಗಳಲ್ಲಿ ಎಷ್ಟು ಅಂಕ ಪಡೆದಿದ್ದಾರೆ ಎಂಬುದರ ಕುರಿತು ಮುಖ್ಯೋಪಾಧ್ಯಾಯರಿಂದ ಸಮಗ್ರ ಮಾಹಿತಿ ಪಡೆದ ಜಿಲ್ಲಾಧಿಕಾರಿ ಕೆ ಲಕ್ಷ್ಮಿ ಪ್ರಿಯ ಅವರು ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಶಿಕ್ಷಕರು ಮಕ್ಕಳಿಗೆ ಭೋದಿಸುವ ವೇಳೆ ಗುಣಮಟ್ಟಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮುಂಡಗೋಡಕ್ಕೆ ಭೇಟಿ ನೀಡಿದ ಅವರು ಮಕ್ಕಳೊಂದಿಗೆ ಬೆರೆತು ಶಾಲೆಯಲ್ಲಿ ಯಾವುದೇ ರೀತಿಯ ಕುಂದು ಕೊರತೆಗಳಿದ್ದರೆ ತಿಳಿಸಿ, ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿದ್ದಾರೋ ಇಲ್ಲವೋ ಎನ್ನುವುದರ ಕುರಿತು ಮಕ್ಕಳಿಂದಲೇ ಮಾಹಿತಿ ಪಡೆದರು.
ಬಳಿಕ ಅಕ್ಷರದಾಸೋಹದ ಬಿಸಿಯೂಟದ ಅಡುಗೆ ಮನೆ ತೆರಳಿ ಅಡುಗೆ ಮಾಡುವವರಿಂದ ಮಾಹಿತಿ ಪಡೆದರು.ಇದೇ ವೇಳೆ ಅಕ್ಕಿ ,ಬೇಳೆ,ತರಕಾರಿ ಗುಣಮಟ್ಟ ಪರೀಕ್ಷಿಸಿದರು.
ತಾಲೂಕ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ಕುಂದು ಕೊರತೆಗಳನ್ನು ಮತ್ತು ಆಸ್ಪತ್ರೆಯಲ್ಲಿ ಲಭ್ಯ ಸೌಲಭ್ಯಗಳ ಪರಿಶೀಲನೆ ನಡೆಸಿದರು,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಯ ಪೋಷಣ ಮಾಸಾಚರಣೆ ಪಾಲ್ಗೊಂಡು ಅಧಿಕಾರಿಗಳಿಂದ ಮಾಹಿತಿ ಪಡೆದರು ಬಳಿಕ ಹಳೂರು ನಂಬರ್ 2 ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಶಿರಸಿ ಉಪವಿಭಾಗದ ಸಹಾಯಕ ಆಯುಕ್ತರಾದ ಕಾವ್ಯರಾಣಿ, ಮುಂಡಗೋಡ ತಹಶೀಲ್ದಾರ್ ಶಂಕರ್ ಗೌಡಿ, ತಾಲೂಕ ಪಂಚಾಯತ ಕಾರ್ಯ ನಿರ್ವಹಣಾ ಅಧಿಕಾರಿ ಟಿ ವಾಯ ದಾಸನಕೊಪ್ಪ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಚಂದ್ರಶೇಖರ್, ಬಿಇಒ ಜಕಣಾಚಾರಿ,ಕಂದಾಯ ಸಿಬ್ಬಂದಿಗಳು ಸೇರಿದಂತೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.