ಬೀದರ್:ರಾಷ್ಟ್ರೊತ್ಥಾನ ಪರಿಷತ್ ಬೆಂಗಳೂರು ವತಿಯಿಂದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಬೀದರನಲ್ಲಿ ದಿನಾಂಕ 19-09-2024ರಂದು ಬಿ.ಎಡ್. ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡು, ರಾಜ್ಯಮಟ್ಟದ ಭಾಷಣ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.
ಸ್ಪರ್ಧೆಯ ತೀರ್ಪುಗಾರರಾಗಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬೀದರ ಪ್ರಾಧ್ಯಾಪಕರಾದ ಡಾ.ವಿದ್ಯಾ ಪಾಟೀಲ ಅವರು ಮಾತನಾಡಿ ಸ್ಪರ್ಧೆಗಳು ವ್ಯಕ್ತಿಗಳ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಅವರ ಪ್ರಗತಿಯ ಸೂಚಕವಾಗಿ, ತನ್ನ ಕ್ಷೇತ್ರದಲ್ಲಿ ತನ್ನದೇ ಆದಂತಹ ಛಾಪು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಸ್ಪರ್ಧಾರ್ಥಿಗಳು ವಿಷಯದ ಕುರಿತು ಮಾಹಿತಿ ಸಂಗ್ರಹಿಸಿ ಭಾಷಾ ಪ್ರಭುತ್ವ, ವಾಕ್ ಚಾತುರ್ಯ, ಭಾಷಾ ಬಳಕೆಯ ಶೈಲಿಯ ಬಗ್ಗೆ ತಿಳಿದುಕೊಂಡಿದ್ದರೆ ಗೆಲುವು ಸಾಧಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟಕರಾದ ಡಾ.ಮಲ್ಲಿಕಾರ್ಜುನ ಚ. ಕನಕಟ್ಟೆ ಅವರು ಮಾತನಾಡಿ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕೃತಿ, ಸಂಸ್ಕಾರದ ಮಹತ್ವ ಅರಿತು ಅದನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರು ಕ್ರೀಯಾಶೀಲರಾಗಬೇಕು. ರಾಷ್ಟ್ರದ ಅಭಿವೃದ್ಧಿಗೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಬೇಕೆಂದು ಹೇಳಿದರು.
ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ಬೀದರ, ಭಾಲ್ಕಿ ಮತ್ತು ಬಸವಕಲ್ಯಾಣ ಶಿಕ್ಷಣ ಮಹಾವಿದ್ಯಾಲಯಗಳ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಲಕ್ಷ್ಮಿ ಬಿರಾದಾರ, ರಾಜಕುಮಾರ ಸಿಂಧೆ, ನಿಲೇಶ್ ಟೊಂಪೆ ಹಾಗೂ ಮುಖ್ಯ ಅತಿಥಿಗಳಾಗಿ ಓಂಕಾರ ಮಹಾಶೆಟ್ಟಿ, ಕಲಬುರಗಿ ವಿಭಾಗೀಯ ಸಂಯೋಜಕರಾದ ಸಂಜೀವಕುಮಾರ, ಬೀದರ ಜಿಲ್ಲಾ ಎಬಿವಿಪಿ ಸಂಘಟನಾ ಕಾರ್ಯದರ್ಶಿ ಹೇಮಂತ, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಎಲ್ಲಾ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮದ ಪ್ರಸ್ತಾವಿಕ ನುಡಿ ಪ್ರಾಧ್ಯಾಪಕರಾದ ವೀಣಾ ಜಲಾದೆ, ಸ್ವಾಗತವನ್ನು ಮತ್ತು ಸಮಾರೋಪವನ್ನು ಉಪನ್ಯಾಸಕ ಪಾಂಡುರುಂಗ ಕುಂಬಾರ, ನಿರೂಪಣೆಯನ್ನು ಶಿವಶರಣಪ್ಪ ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ರಾಷ್ಟ್ರೊತ್ಥಾನ ಪರಿಷತ್ ಬೆಂಗಳೂರು ಬೀದರನ ಜಿಲ್ಲಾ ಸಂಯೋಜಕರಾದ ಶಿವಶರಣು ಚಾಂಬೊಳ್ ಏರ್ಪಡಿಸಿದರು.
ವರದಿ: ಸಾಗರ ಪಡಸಲೆ