ದಾವಣಗೆರೆ:ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಮರಿಗೂಂಡನಹಳ್ಳಿಯಲ್ಲಿ ಬುಧವಾರ ಮರಳಿನ ವಿಚಾರವಾಗಿ ಕಡದಕಟ್ಟೆ ಮತ್ತು ಮರಿಗೂಂಡನಹಳ್ಳಿ ಎರಡು ಗ್ರಾಮಗಳ ಗ್ರಾಮಸ್ಥರ ನಡುವೆ ನಡೆದ ಜಗಳವು ನಂತರ ಅತಿರೇಕಕ್ಕೆ ಹೋಗಿ ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾಗಿದೆ
ಇಲ್ಲಿ ತುಂಬಿ ಹರಿಯುವ ತುಂಗಭದ್ರಾ ನದಿ ದಡದಲ್ಲಿ ಇರುವ ಮರಳು ಬಂಗಾರದ ಇದ್ದಂತೆ ಇಲ್ಲಿನ ಕೆಲವೊಂದು ಊರುಗಳಲ್ಲಿ ಗೊವಿನಕೋವಿ,ಹರಳಹಳ್ಳಿ,
ದಿಡಗೂರು,ಬಿದ್ದರಗಡ್ಡೆ, ಮಾದಾಪುರ, ಇನ್ನೂ ಹಲವಾರು ಊರುಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ,ಈ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಕೆಲವು ರಕ್ಷಣಾ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ತುಟಿ ಬಿಚ್ಚದೆ ಕುಳಿತಿದ್ದಾರೆ
ಹಗಲು ಹೊತ್ತಿನಲ್ಲಿ ಮತ್ತು ರಾತ್ರಿ ಎನ್ನದೇ ಮರಳು ದಂಧೆ ನಡೆಯುತ್ತಿದೆ ಲಾರಿ, ಟ್ರಾಕ್ಟರ್ ಗಳಲ್ಲಿ, ಸಾಗಿಸುವ ಕೆಲಸ ನಡೆಯುತ್ತಿದೆ ಇದಕ್ಕೆ ಯಾರ ಬೆಂಬಲ ಇದೆ ಎಂಬುದೇ ತಿಳಿದಿಲ್ಲ ಈ ವಿಚಾರದಲ್ಲಿ ಎಸ್ ಪಿ ಡಾಕ್ಟರ್ ಅರುಣ್ ಕುಮಾರ್ ಅವರು ಕಡಕ್ ವಾರ್ನಿಂಗ್ ಮಾಡಿದಕ್ಕೆ ಅವರನ್ನು ವರ್ಗಾವಣೆ ಮಾಡಿದರು.ಈ ಮರಳು ದಂಧೆ ನಡೆಸುತ್ತಿರುವವರು ಯಾರ ಪ್ರಾಣವನ್ನು ತೆಗೆಯಲು ಹಿಂಜರಿಯುವುದಿಲ್ಲ ಎಂಬುವುದಕ್ಕೆ ರಾಜ್ಯದಲ್ಲಿ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ ಅದೇ ರೀತಿ ನ್ಯಾಮತಿ ತಾಲೂಕಿನ ಮರಿಗೂಂಡನಹಳ್ಳಿಯಲ್ಲಿ ಬುಧವಾರ ನಡೆದ ಘಟನೆ.
ಶಿವರಾಜ್ ಹತ್ಯೆಯಾದ ವ್ಯಕ್ತಿ. ಭರತ್ ಗಾಯಗೊಂಡ ವ್ಯಕ್ತಿ ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಪಡೆಯುತ್ತಿದ್ದಾರೆ ಮೇಲೆ ಅಕ್ರಮವಾಗಿ ಮರಳು ಮಾಫಿಯಾ ನಡೆಸುತ್ತಿದ್ದ ಚೀಲೂರು ಕಡೆದಕಟ್ಟೆ ಗ್ರಾಮದ ಸತೀಶ್ ಎಂಬ ಅಕ್ರಮ ಮರಳು ಮಾಫಿಯಾ ದಂಧೆಕೋರ ಹಾಗೂ ಇದಕ್ಕೆ ಸಹಕರಿಸುತ್ತಿದ್ದ ತನ್ನ ಇಬ್ಬರು ಮಕ್ಕಳು ಹಾಗೂ ಆತನ ಸಹಚರರು ಇಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿ ತಪ್ಪಿಸಿಕೊಂಡಿದ್ದು ತಪಿತಸ್ತರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು
ಇನ್ನಾದರೂ ಈ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುತಾರ ನಮ್ಮ ಅಧಿಕಾರಿಗಳು ಎಂದು ಸಾರ್ವಜನಿಕರು ಮಾತನಾಡಿಕೊಳುತ್ತಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.