ಯಾದಗಿರಿ:ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಗೌಡಪ್ಪ ಗೌಡ ಆಲ್ದಾಳ ಇವರು ದಿನಾಂಕ 22/9/2024ರಂದು ಬೆಳಿಗ್ಗೆ 10 ಗಂಟೆಗೆ ಶಹಾಪುರದಿಂದ ಹೊರಟು ಮುಂಜಾನೆ 11 ಕ್ಕೆ ಸುರಪುರಕ್ಕೆ ಆಗಮಿಸಿ ಮಾನ್ಯ ಸುರಪುರ ತಾಲೂಕ ಅಧ್ಯಕ್ಷರು ಮತ್ತು ಪಧಾದಿಕಾರಿಗಳು ಸುರಪುರದಲ್ಲಿ ಮಾನ್ಯ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತದಲ್ಲಿ ಬರಮಾಡಿಕೊಂಡು ಸ್ವಾಗತಿಸುವರು ನಂತರ ಎಲ್ಲರೂ ಜೊತೆಗೂಡಿ ಸುರಪುರದಿಂದ ಹುಣಸಗಿ ಪಟ್ಟಣಕ್ಕೆ ಆಗಮಿಸಿ ಸಮಯ 12 ಗಂಟೆಗೆ ಹುಣಸಗಿಯಲ್ಲಿ ಮಾನ್ಯ ಗೌರವ ಅಧ್ಯಕ್ಷರ ಜೊತೆಗೂಡಿ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಾಲಯ ಉದ್ಘಾಟನೆ,ನಂತರ 1 ಗಂಟೆಗೆ ಹುಣಸಗಿ ತಾಲೂಕಿನ ಬಪ್ಪರಗಿ ಗ್ರಾಮಕ್ಕೆ ಭೇಟಿ ಕೊಟ್ಟು ಬಹಿಷ್ಕಾರಗೊಂಡ ಕುಟುಂಬಕ್ಕೆ ಸಾಂತ್ವಾನ ಹೆಳಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಾಲ್ಮೀಕಿ ಸಮಾಜದ ಜಿಲ್ಲಾ ಗೌರವ ಅಧ್ಯಕ್ಷರಾದ ಶ್ರೀ ಸಿದ್ದನಗೌಡ ಪಾಟೀಲ ಕರಿಭಾವಿ ಅವರು ತಿಳಿಸಿದ್ದಾರೆ.
