ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಜಾತ್ಯಾತೀತ ಜನತಾದಳ ಘಟಕದ ವತಿಯಿಂದ ಇಂದು ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಬೂತ್ ಮಟ್ಟದ ಸಮಿತಿಗಳನ್ನು ರಚನೆ ಮಾಡುವ ಸಂಬಂಧ ಸಮಾರಂಭವನ್ನು ನಡೆಸಿ ಸದಸ್ಯತ್ವಕ್ಕೆ ಚಾಲನೆ ನೀಡಲಾಯಿತು. ತಾಲೂಕಿನ ಎಲ್ಲಾ ಹೋಬಳಿಗಳಿಂದ ಪಾವಗಡ ನಗರವು ಸೇರಿದಂತೆ ಐದು ಘಟಕಗಳನ್ನಾಗಿ ವಿಂಗಡಿಸಿ ಸದಸ್ಯತ್ವ ಅಭಿಯಾನವನ್ನು ಪ್ರಾರಂಭ ಮಾಡಲಾಯಿತು. ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಆರ್ ಸಿ ಅಂಜನಪ್ಪ ಮಾಜಿ ಶಾಸಕರಾದ ಕೆ ಎಂ ತಿಮ್ಮರಾಯಪ್ಪ ರಾಷ್ಟ್ರೀಯ ಪಾರ್ಲಿಮೆಂಟರಿ ಸದಸ್ಯರಾದ ಎನ್ ತಿಮ್ಮಾರೆಡ್ಡಿ ಪ್ರಮುಖವಾಗಿ ಪಾಲ್ಗೊಂಡಿದ್ದು ತಾಲೂಕು ಜೆಡಿಎಸ್ ಅಧ್ಯಕ್ಷರಾದ ಎನ್ಎರಣ್ಣ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೋಬಳಿವಾರು ಪ್ರವಾಸವನ್ನು ಕೈಗೊಳ್ಳುವುದಾಗಿ ಸದಸ್ಯರನ್ನು ಗುರುತಿಸುವ ಕಾರ್ಯವನ್ನು ಹೋಬಳಿ ಮಟ್ಟದ ಕೇಂದ್ರ ಸ್ಥಾನಗಳಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಒಳಗೊಂಡಂತೆ ಸಮಾವೇಶ ನಡೆಸಲಾಗುವುದು ಎಂದು ಜಿಲ್ಲಾ ಅಧ್ಯಕ್ಷರು ತಿಳಿಸಿದರು ಮಾಜಿ ಶಾಸಕರಾದ ಕೆ.ಎಂ ತಿಮ್ಮರಾಯಪ್ಪ ಅವರು ಪ್ರವಾಸ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರ ಯಾವುದೇ ಯೋಜನೆಗಳನ್ನು ಕಾರ್ಯಗತ ಮಾಡಿರುವುದಿಲ್ಲ ಇಲ್ಲಿನ ಶಾಸಕರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಅದಕ್ಕೆ ಸೊಪ್ಪು ಹಾಕುತ್ತಿದ್ದಾರೆಂದು ಆರೋಪ ಮಾಡಿದರು ಉಳಿದಂತೆ ಅನೇಕ ನಾಯಕರು ಮಾತನಾಡಿದರು ಮುಖಂಡರಾದ ಬಲರಾಮರೆಡ್ಡಿ ಚೆನ್ನಮಲ್ಲಪ್ಪ ರಾಜಶೇಖರಪ್ಪ ಕೋಟಗುಡ್ಡ ಅಂಜಯ್ಯ ಲಿಂಗದಹಳ್ಳಿ ಸಣ್ಣ ರೆಡ್ಡಿ ಭೀಮನ ಕುಂಟೆ ಸತ್ಯಪ್ಪ ಕೆಂಚಗಾನಹಳ್ಳಿ ಗೋವಿಂದ ಬಾಬು ನಗರ ಅಧ್ಯಕ್ಷರಾದ ತಿಮ್ಮರಾಜು ಅಲ್ಪ ಸಂಖ್ಯಾತರ ಘಟಕದ ಯುನಸ್ ರೈತ ಘಟಕದ ಗಂಗಾಧರ ನಾಯ್ಡು ಮುಖಂಡರಾದ ವೈ ಆರ್ ಚೌದರಿ ಎಲ್ಲಾ ಹೋಬಳಿ ಘಟಕಗಳ ಅಧ್ಯಕ್ಷರುಗಳು ಪಾಲ್ಗೊಂಡಿದ್ದರು ಗೋವಿಂದಪ್ಪ ಅಕ್ಕಲಪ್ಪ ನಾಯ್ಡು ಶ್ರೀಮತಿ ಅಂಬಿಕಾ ಶ್ರೀಮತಿ ಶಕುಂತಲಾ ಬಾಯಿ ಇನ್ನಿತರರು ಪಾಲ್ಗೊಂಡಿದ್ದರು. ಮಹಾ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಗ್ರಾಮ ಪಂಚಾಯಿತಿವಾರು ಮುಖಂಡರಿಗೆ ಸದಸ್ಯತ್ವ ಮತ್ತು ಸಕ್ರಿಯ ಸದಸ್ಯತ್ವ ಪುಸ್ತಕಗಳನ್ನು ಸಮಾರಂಭದಲ್ಲಿ ನೀಡಲಾಯಿತು.
ವರದಿ ಪಾವಗಡ.ಕೆ. ಮಾರುತಿ ಮುರಳಿ