ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಡಗರ ಸಂಭ್ರಮದಿಂದ, ಜರುಗಿದ ಮಾರುತೇಶ್ವರ ಬಸವೇಶ್ವರ ರಥೋತ್ಸವ

ತಿಮ್ಮಾಪೂರ :ಪ್ರತಿ ವರ್ಷದಂತೆ ಈ ವರ್ಷವೂ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದ ಆರಾದ್ಯದೇವರಾದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಇತ್ತೀಚಿಗೆ ಮಹಾರಥೋತ್ಸವ ಸಡಗರ ಸಂಭ್ರಮದಿಂದ ನೇರವೇರಿತು.
ಅಂದು ಮಧ್ಯಾಹ್ನ ಕಳಸದ ಮೆರವಣಿಗೆಯು ಗ್ರಾಮದಲ್ಲಿ ಸಂಚರಿಸಿದ ನಂತರದ ಕಳಸವನ್ನು ರಥಕ್ಕೆ ಏರಿಸಲಾಗಿತ್ತು ನಂತರ ಭಕ್ತರು ರಥದ ಹಗ್ಗ ಎಳೆಯುವ ಮೂಲಕ ಭಕ್ತಿ ಭಾವದಲ್ಲಿ ಪರವಶರಾದರು.
ರಥೋತ್ಸವದ ಪೂರ್ವದಲ್ಲಿ ಗ್ರಾಮದರಲ್ಲಿ ಉಚ್ಚಯ್ಯ (ಸಣ್ಣ ತೇರು)ನ್ನು ಪಾದಗಟ್ಟೆಯವರಿಗೆ ಎಳೆಯಲಾಯಿತು.


ಕಳೆದ ೨೦೦೦ ಇಸ್ವಿಯಲ್ಲಿ ಚಿತ್ತರಗಿ-ಇಲಕಲ್ ನ ವಿಜಯ ಮಹಾಂತ ಶ್ರೀಗಳು ಕೊಳೂರ ಶ್ರೀಗಳು, ಹಡಗಲಿ- ನಿಡಗುಂದಿಯ ರುದ್ರಮುನಿ ಶ್ರೀಗಳು ನಂದವಾಡಗಿಯ ಸಾನಿಧ್ಯದಲ್ಲಿ ಪ್ರಾರಂಭಗೊoಡು ಈ ಇಂದಿಗೆ ೨೩ ವರ್ಷಕ್ಕೆ ಪೂರೈಸಿ ೨೪ ವರ್ಷದ ರಥೋತ್ಸವ ಪಾದರ್ಪಣೆಗೊಂಡ್ಡಿದ್ದು ಈ ವರ್ಷದ ರಥೋತ್ಸವವನ್ನು ಹಡಗಲಿ-ನಿಡಗುಂದಿಯ ರುದ್ರಮುನಿ ಶ್ರೀಗಳು ನಂದವಾಡಗಿಯ ಚನ್ನಬಸವ ಶ್ರೀಗಳು ಗ್ರಾಮದ ವೇ.ಮೂ. ಬಸಯ್ಯ ಹೀರೇಮಠ ಸಾಮೂಹಿಕವಾಗಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಗ್ರಾಮದ ಹಿರಿಯರು ಇತರರು ಉಪಸ್ಥಿತರಿದ್ದರು.
ವಿವಿಧ ಬಣ್ಣದ ಧ್ವಜ ಬಾಳೆಕಂಬಗಳ ವಿವಿಧ ಬಗೆಯ ಹೂಗಳಿಂದ ಶೃಂಗಾರ ಮಾಡಿದ ಭವ್ಯವಾದ ರಥ ನೋಡುಗರ ಕಣ್ಮನ ಸೆಳೆಯಿತು. ರಥೋತ್ಸವದಲ್ಲಿ ತಿಮ್ಮಾಪೂರ, ಹಡಗಲಿ, ಚಿತ್ತರಿಗಿ, ಹುನಗುಂದ ಇಲಕಲ್ಲ ಅಮರಾವತಿ, ಬೇವೂರ, ಹಳ್ಳೂರ, ಭಗವತಿ, ಬೆಳಗಲ್ಲ, ಇದ್ದಲಗಿ, ಧನ್ನೂರ ಕೂಡಲಸಂಗಮ, ಬೆಂಗಳೂರ ಸೇರಿದಂತೆ ವಿವಿಧ ಮಹಾರಾಷ್ರ ಕೊಲ್ಹಾಪೂರ ಪೂಣೆ ಮಂಗಳೂರಿನ ಭಕ್ತರು ಸೇರಿದಂತೆ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಸೂಕ್ತ ಬಂದೋಬಸ್ತ್:
ಹುನಗುಂದ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆಯ ಅಧಿಕಾರಿಗಳಾದ ಪ್ರಕಾಶ ಡಿ. ನೇತೃತ್ವದಲ್ಲಿ ಹೆಡ್ ಕಾನ್ಸ್ಟೇಬಲ್ ಗಳಾದ ಎನ್ ಸಿ ಪಾಟೀಲ್ ಸಿದ್ದು ಕೌಲಗಿ ಸಿ ಸಿ ಪಾಟೀಲ ಪಿ ಸಿ ಗಳಾದ ಬಸವರಾಜ ಗೌಡರ ಬಸಯ್ಯ ಹಿರೇಮಠ ಪ್ರಭು ಪವಾರ ಭೀಮಸೇನ ಮಾದರ ಬಲಿ ಚಕ್ರವರ್ತಿ ಸಂಗಮ ಇತರರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ