ಕೊಪ್ಪಳ:ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್ ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗುಂಪಾಟ ಹಾಗೂ ವೈಯಕ್ತಿಕ ಕ್ರೀಡಾಟದಲ್ಲಿ ಡಣಾಪೂರದಿಂದ ಬಾಲಕಿಯರ ಕಬ್ಬಡ್ಡಿ ಪ್ರಥಮ ಸ್ಥಾನ ಪಡೆದಿದ್ದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ ಅದೇ ರೀತಿಯಲ್ಲಿ ಬಾಲಕಿಯರ ಖೋಖೋ ದ್ವಿತೀಯ ಸ್ಥಾನ ಪಡೆದಿದೆ .ವೈಯಕ್ತಿಕ ಓಡಾಟದಲ್ಲಿ 100 ಮೀಟರ್ ಹಾಗೂ 400 ಮೀಟರ್ ಓಟದಲ್ಲಿ ದ್ವೀತಿಯ ಸ್ಥಾನ ಪಡೆದ ಅಕ್ಷತಾ ಶಿವುಕುಮಾರ ಹಾಗೂ 3000 ಮೀಟರ್ ಓಟದಲ್ಲಿ ಸೌಜನ್ಯ ಮಹಿಳಾ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ವೇಳೆ ವಿಠ್ಠಲ್ ಜಾಬಗೌಡರ ಮಾನ್ಯ ಸಹಾಯಕ ನಿರ್ದೇಶಕರ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕೊಪ್ಪಳ ಹಾಗೂ ಎ ಬಸವರಾಜ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರು ದೈಹಿಕ ಶಿಕ್ಷಕರಾದ ಚಂದ್ರಶೇಖರ ಜಾಪಾಳ ,ಕಬ್ಬಡ್ಡಿ ಕ್ಯಾಪ್ಟನ್ ನೇತ್ರಾವತಿ ಹಾಗೂ ಗ್ರಾಮದ ಯುವಕರಾದ ರಾಘವೇಂದ್ರ ,ಮಂಜುನಾಥ ,ಬಸವರಾಜ , ತರಬೇತುದಾರರಾದ ಮುತ್ತುರಾಜ ,ಮಾರುತಿ ಪ್ರವೀಣ ಇತರರು ಭಾಗಿ ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.