ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ನಾಗಲಮಡಿಕೆ ಸುಪ್ರಸಿದ್ಧ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ತಂಡ ಭೇಟಿ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ಸುಪ್ರಸಿದ್ಧ ಶ್ರೀ ಶ್ರೀ ಸುಬ್ರಮಣ್ಯೇಶ್ವರ ದೇವಸ್ಥಾನಕ್ಕೆ ಕರ್ನಾಟಕ ಸರ್ಕಾರ ಮುಜರಾಯಿ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿದರು.
ನಾಗಲಮಡಿಕೆ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನಕ್ಕೆ ವರ್ಷದಲ್ಲಿ ಎರಡು ಬಾರಿ ಜಾತ್ರಾ ಮಹೋತ್ಸವ ನಡೆಯುತ್ತದೆ.ಈ ಜಾತ್ರೆ ಮಹೋತ್ಸವಕ್ಕೆ ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಮೂಲೆ ಮೂಲೆಯಿಂದ ಸಾವಿರಾರು ಭಕ್ತಿಯಿಂದ ಭಕ್ತಾದಿಗಳು ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ ಸಾವಿರಾರು ಜನಗಳು ಬಂದು ಹೋಗೋ ಜಾಗದಲ್ಲಿ ಅನೇಕ ಮೂಲಭೂತ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತ ಆಗಿದೆ ಆದ್ದರಿಂದ ಇಂದು ಕರ್ನಾಟಕ ಸರ್ಕಾರದ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಜೀರ್ಣೋದ್ಧಾರ ಮಾಡೋದಿಕ್ಕೆ ನೀಲಿ ನಕ್ಷೆಯನ್ನು ನೀಡಿದ್ದಾರೆ.ಕರ್ನಾಟಕ ಸರ್ಕಾರ ಮುಜರಾಯಿ ಇಲಾಖೆಯ ಐಎಎಸ್ ಅಧಿಕಾರಿಗಳಾದ ಎಂ ವಿ ವೆಂಕಟೇಶ್ ಮಾತನಾಡಿ ಹಲವು ವರ್ಷಗಳಿಂದ ಯಾವುದೇ ಅಭಿವೃದ್ಧಿಯನ್ನು ಕಂಡಿಲ್ಲ ಎಂದು ಶಾಸಕರು ತಾಲೂಕಿನ ಎಲ್ಲಾ ಮುಖಂಡರು ಹಲವು ಭಕ್ತಾದಿಗಳು ಸುಮಾರು ವರ್ಷಗಳಿಂದ ಬೇಡಿಕೆಯನ್ನು ಇಟ್ಟಿದ್ದರು ಬೇಡಿಕೆಯನ್ನು ಈಗ ಸರ್ಕಾರ ಈಡೇರಿಸುತ್ತಿದೆ ಎಂದರು ನಂತರ ಅದಕ್ಕೆ ಸಂಬಂಧಪಟ್ಟಂತ ವಾಸ್ತು ಶಿಲ್ಪದಾರರನ್ನು ಕರೆ ತಂದು ಸ್ಥಳವನ್ನು ಪರಿಶೀಲಿಸಿದರು.

ನಂತರ ರೈತ ಸಂಘದ ಅಧ್ಯಕ್ಷರಾದ ನಾಗಭೂಷಣ್ ರೆಡ್ಡಿ ಅವರು ಮಾತನಾಡಿ ಶ್ರೀ ಕ್ಷೇತ್ರ ನಾಗಲಮಡಿಕೆ ಸುಬ್ರಮಣ್ಯ ಸ್ವಾಮಿ ದೇವಸ್ಥಾನವು ಕರ್ನಾಟಕದಲ್ಲಿ ಹೆಚ್ಚು ಪ್ರಸಿದ್ಧತೆಯನ್ನು ಪಡೆದಿದೆ ಕರ್ನಾಟಕದಲ್ಲಿ ಸುಬ್ರಮಣ್ಯನ ಮೂರು ದೇವಸ್ಥಾನಗಳು ಇದವೆ ಒಂದು ಕುಕ್ಕೆ ಸುಬ್ರಮಣ್ಯ ಇನ್ನೊಂದು ಘಾಟಿ ಸುಬ್ರಮಣ್ಯ ಕೊನೆಯಲ್ಲಿ ನಾಗಲಮಡಿಕೆ ಅಂತ್ಯ ಸುಬ್ರಮಣ್ಯ ಸ್ವಾಮಿ ಆದಿ ಅಂತ್ಯ ಎಂಬುವುದು ಬಹಳಷ್ಟ ಪ್ರಸಿದ್ಧತೆಯನ್ನು ಪಡೆದಿರುತ್ತದೆ ಆದರೆ ವರ್ಷದಿಂದ ವರ್ಷಕ್ಕೆ ಸುಪ್ರಸಿದ್ಧ ಕ್ಷೇತ್ರಕ್ಕೆ ಭಕ್ತಾದಿಗಳು ದಂಡು ಹರಿದು ಬರುತ್ತಿದೆ ಆದರೆ ಈ ದೇವಸ್ಥಾನವು ಜೀರ್ಣೋದ್ಧಾರ ಆಗಿಲ್ಲ ಹಾಗೂ ಅನೇಕ ಮೂಲಭೂತ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತವಾಗಿದೆ ಭಕ್ತಾದಿಗಳ ಕೊರಗು ಆಗಿದೆ ಆದರಿಂದ ನಾವು ಅನೇಕ ಬಾರಿ ಸರಕಾರಕ್ಕೆ ದೇವಸ್ಥಾನದ ಬಗ್ಗೆ ಬೇಡಿಕೆಯನ್ನು ಇಟ್ಟಿದ್ದೇವೆ ಆದರೆ ಈ ಬಾರಿ ಕರ್ನಾಟಕ ಸರ್ಕಾರ ಮುಜರಾಯಿ ಇಲಾಖೆ ತಂಡದವರು ಇಂದು ದೇವಸ್ಥಾನಕ್ಕೆ ಭೇಟಿ ನೀಡಿ ಜೀರ್ಣೋದ್ಧಾರ ಮಾಡಬೇಕೆಂದು ಸರ್ಕಾರ ವತಿಯಿಂದ ವಾಸ್ತುಶಿಲ್ಪದಾರರನ್ನು ಕರೆತಂದು ನೀಲಿ ನಕ್ಷೆಯನ್ನು ಸಿದ್ದಪಡಿಸಿ ಮುಂದಿನ ದಿನಗಳಲ್ಲಿ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುತ್ತಾರೆಂದು ಭಕ್ತಾದಿಗಳಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಆಗಮನ ಪಂಡಿತರು ವಿಜಯ್ ಕುಮಾರ್,ವಾಸ್ತುಶಿಲ್ಪಿ ಅಧ್ಯಕ್ಷರು ರಾಜೇಶ್ವರಿ, ಮಾಜಿ ಮಂತ್ರಿಗಳು ವೆಂಕಟರಮಣಪ್ಪ, ತಾಸಿಲ್ದಾರ್ ವರದರಾಜು,ಕಾರ್ಯನಿರ್ವಾಹಕ ಅಧಿಕಾರಿಗಳು ಸುನಿಲ್ ಕುಮಾರ್ ರೈತ ಸಂಘದ ಅಧ್ಯಕ್ಷರು ನಾಗಭೂಷಣ್ ರೆಡ್ಡಿ ,ಕೋಟಿ ನರಸಪ್ಪ, ರಾಮಾಂಜಿ,ದೇವಸ್ಥಾನದ ಅರ್ಚಕರು ಹಲವಾರು ಮುಖಂಡರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ವರದಿ ಪಾವಗಡ:ಕೆ. ಮಾರುತಿ ಮುರಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ