ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಸಮೂಹ ಸಂಪನ್ಮೂಲ ಕೇಂದ್ರ ಕೋಳಕೂರ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಕೋಳಕೂರ ರವರ ಸಂಯುಕ್ತಾಶ್ರಯದಲ್ಲಿ 2024-25ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ ಸ್ಪರ್ಧೆಗಳು ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕಲಾಭವನದಲ್ಲಿ ಅದ್ದೂರಿಯಾಗಿ ನಡೆಯಿತು.
ಸಮಾರಂಭವನ್ನು ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ನೀಲಮ್ಮ ಗಂ.ಬಸವರಾಜ ಕಟ್ಟಿ ಉದ್ಘಾಟಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವೀರಣ್ಣ ಬೊಮ್ಮನಳ್ಳಿರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಸಯ್ಯ ಸಿ.ಗದ್ದಗಿಮಠರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೋಳಕೂರ ಕ್ಲಸ್ಟರ್ ಮಟ್ಟದ ವ್ಯಾಪ್ತಿಯಲ್ಲಿ ಬರುವ ಕೋಳಕೂರ, ರದ್ದೇವಾಡಗಿ, ಗೌನಳ್ಳಿ, ರಾಸಣಗಿ ,ಮಂದ್ರವಾಡ,ಹಂದನೂರ, ಕೂಡಿ,ಕೋನಾಹಿಪ್ಪರಗಾ,ಕೋಬಾಳ ಹಾಗೂ ಬಣಮಿಗಿ ಶಾಲೆಯ ವಿದ್ಯಾರ್ಥಿಗಳೆಲ್ಲರೂ ಭಾಗವಹಿಸಿ ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಿದರು.
ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಿಕ್ಷಕ ವೃಂದದವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
2024-25 ನೇ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವದಲ್ಲಿ ಪ್ರಾಥಮಿಕ,ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಕಂಠಪಾಠ,ಭಾಷಣ,ಧಾರ್ಮಿಕ ಪಠಣ,ದೇಶಭಕ್ತಿಗೀತೆ,ಭಕ್ತಿಗೀತೆ,ಜಾನಪದ ಗೀತೆ, ಭಾವಗೀತೆ,ಭರತನಾಟ್ಯ,ಪ್ರಬಂಧ ರಚನೆ,ಚಿತ್ರಕಲೆ,ಮಿಮಿಕ್ರಿ,ಚರ್ಚಾ ಸ್ಪರ್ಧೆ,ರಂಗೋಲಿ,ಗಝಲ್,ಕವನ / ಪದ್ಯ ವಾಚನ,ಆಶುಭಾಷಣ,ಜಾನಪದ ನೃತ್ಯ,ಕ್ವಿಜ್,ಕವ್ವಾಲಿ,ಕ್ಲೇ ಮಾಡಲಿಂಗ್ ಸೇರಿದಂತೆ ಅನೇಕ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಈ ಭವ್ಯ ಸಮಾರಂಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀ ಎಸ್.ಟಿ.ಬಿರಾದಾರ, ಇಸಿಓ ಶ್ರೀ ವಿಜಯಕುಮಾರ್ ರಾಠೋಡ್, ಎನ್.ಜಿ.ಓ. ಜೇವರ್ಗಿ ಅಧ್ಯಕ್ಷರಾದ ಶ್ರೀ ಗುಡುಲಾಲ್ ಶೇಖ್,ಜೇವರ್ಗಿ ಪ್ರಾ.ಶಾ.ಶಿ.ಸಂಘದ ಅಧ್ಯಕ್ಷರಾದ ಶ್ರೀ ಮರೆಪ್ಪ ಹೊಸಮನಿ,ಸಂಸ್ಥೆಯ ಗೌರವ ಅಧ್ಯಕ್ಷರಾದ ಶ್ರೀ ಚನ್ನಬಸಯ್ಯ ಸ್ವಾಮಿ ಗದ್ದಗಿಮಠ,ಕೋಳಕೂರ, ಸ.ಪ್ರೌ.ಶಾಲೆ.ಮುಖ್ಯಗುರುಗಳಾದ ಶ್ರೀ ಮುಕುಂದ ಕುಲಕರ್ಣಿ,ಮುಖ್ಯಗುರುಗಳ ಸಂಘದ ಅಧ್ಯಕ್ಷರಾದ ಶ್ರೀ ಬಾಬು ಚಿತ್ತಾಪೂರಕರ್,ಗವನಳ್ಳಿ ಸ.ಪ್ರೌ.ಶಾಲೆ ಮುಖ್ಯಗುರುಗಳಾದ ಶ್ರೀ ಅಮೃತಾ ಮಾಲಿಪಾಟೀಲ್, ಜೇವರ್ಗಿ ಬಿ.ಆರ್.ಆಯ್.ಟಿ ಗಳಾದ ಶ್ರೀ ಗುರುಶಾಂತಪ್ಪ ಚಿಂಚೋಳಿ, ಎನ್.ಜಿ.ಓ. ರಾಜ್ಯ ಪರಿಷತ್ ಸದಸ್ಯರಾದ ಶ್ರೀ ರುದ್ರಪ್ಪ ಚಟ್ನಳ್ಳಿ, ಶ್ರೀ ಜಯಶ್ರೀ ಕಟ್ಟಿಸಂಗಾವಿ,ಕೋಳಕೂರ ಕ್ಲಸ್ಟರ್ ಮಟ್ಟದ ಸಿ.ಆರ್.ಪಿ. ಶ್ರೀ ಪೈಗಂಬರ್ ಎಸ್.ಅಲ್ದಿ, ಪ್ರಮುಖರಾದ ಶ್ರೀ ಮಹದೇವ ಪಾಳೇದ, ಶ್ರೀ ಸಿದ್ದಣ್ಣಗೌಡ ಪೋಲೀಸ್ ಪಾಟೀಲ್,ಶ್ರೀ ಅಣ್ಣಾರಾಯ್ ಎಚ್. ಕುಮ್ಮಾಣಿ, ಸಿದ್ದಾರ್ಥ ಹನ್ನೂರ, ಮಲಕಣ್ಣ ಹನ್ನೂರ,ಸೇರಿದಂತೆ ಕೋಳಕೂರ ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ,ಹಿರಿಯ ಪ್ರಾಥಮಿಕ ಶಾಲೆ,ಮಾದರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ, ಕೋಳಕೂರ ಪ್ರೌಢಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀ ಶಿವಪುತ್ರ ಎಸ್.ಕೂಡಿ, ಮಾದರಿ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀ ಮಹದೇವ ಹನ್ನೂರ, ಸಂಸ್ಥೆಯ ಸಿಬ್ಬಂದಿಗಳಾದ ಶ್ರೀಮತಿ ಭಾಗ್ಯಶ್ರೀ ಮೇಡಂ,ಶ್ರೀಮತಿ ಮಹಾನಂದ, ಶ್ರೀಮತಿ ಚಂದ್ರಕಲಾ,ಶ್ರೀ ಗೌರಿಶಂಕರ್ ಸೀರಿ, ಶ್ರೀ ರೇವಣಸಿದ್ದ ಪೂಜಾರಿ, ಶಿಕ್ಷಣಾಭಿಮಾನಿಗಳು,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಶ್ರೀ ಶಂಬಣ್ಣ ಹೂಗಾರ್ ಅವರು ನಿರೂಪಿಸಿದರು,ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಶ್ರೀ ಗುಂಡುರಾವ್ ಆಣಿಕೇರಿ ರವರು ಸ್ವಾಗತಿಸಿದರು ಹಾಗೂ ಮುಖ್ಯಗುರುಗಳಾದ ಶ್ರೀಮತಿ ಚೈತ್ರಾ ಎಚ್.ಹಾಲಕಾಯಿರವರು ವಂದಿಸಿದರು.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್ (ಜೇವರ್ಗಿ)