ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಗಾಂವ ಡಿಗ್ರಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿ 2023 ರ ರಾಜ್ಯಶಾಸ್ತ್ರ ವಿಭಾಗದಲ್ಲಿ ಕಲಬುರ್ಗಿ ವಿವಿಗೆ ಮೊದಲ ರಾಂಕ್ ಪಡೆದಕ್ಕಾಗಿ ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸತ್ಕರಿಸಲಾಯಿತು.ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೆಂಗಟಿ, ಪ್ರಾಂಶುಪಾಲ ಡಾ. ಶರಣಪ್ಪ ಮಾಳಗಿ, ಸಾವಿತ್ರಿ ಬಾಯಿ ಶಿಕ್ಷಕಿಯರ ಸಂಘದ ತಾಲ್ಲೂಕು ಅಧ್ಯಕ್ಷೆ ಅಂಜನಾ ಶಿರವಾಳ, ಸಿಆರ್ ಸಿ ಅಂಬಿಕಾ ಉಪ್ಪಿನ, ರಮೇಶ ಕಲ ಖೋರಾ ಇತರರು ಇದ್ದರು.
