ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುಜಯಿಂದ್ರ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ 53ನೇ ವಾರದ ಹರಿದಾಸರ ಉತ್ಸವ ಸೇವಾ ಕಾರ್ಯಕ್ರಮ ನಡೆಯಿತು.
ಕಳೆದ ಒಂದು ವರ್ಷದಿಂದ ಪ್ರತಿ ಗುರುವಾರವು ಭಜನೆ, ಹಾಡುಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಾ ನಿರಂತರವಾಗಿ ವೇದಿಕೆ ವತಿಯಿಂದ ಸೇವಾ ಕಾರ್ಯದಲ್ಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮಣರಾವ್ ಕುಲಕರ್ಣಿ, ಶ್ರೀ ವೆಂಕಟೇಶ ಚನ್ನಳ್ಳಿ, ಶ್ರೀ ಪ್ರಶಾಂತ ಕುಲಕರ್ಣಿ ಇದ್ದರು.
