ತುಮಕೂರು/ಪಾವಗಡ:
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ರಾಜ್ಯದೆಲ್ಲೆಡೆ ಗ್ರಾಮ ಆಡಳಿತಾಧಿಕಾರಿಗಳ ಕುಂದುಕೊರತೆ ಆಲಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಅದರಂತೆ ಇಂದು ಪಾವಗಡ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕಂದಾಯ ಆಡಳಿತಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ತಮ್ಮ ಬೇಡಿಕೆ ಈಡೇರಿಸುವಂತೆ ಕೈ ಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟಿಸಿದ್ದು ಹೀಗೆ.
ಗ್ರಾಮ ಆಡಳಿತಾಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಮೊಬೈಲ್ ಆ್ಯಪ್ ಮೂಲಕ ಕೆಲಸದ ಒತ್ತಡ ಹೇರಲಾಗುತ್ತಿದೆ.ರಜಾ ದಿನಗಳಲ್ಲೂ ಟಾರ್ಗೆಟ್ ನೀಡಿ ಕರ್ತವ್ಯ ನಿರ್ವಹಿಸಬೇಕಾದ ಮಾನಸಿಕ ದೈಹಿಕ ಹಿಂಸೆಯಿದೆ ,ಸರಿಯಾದ ಕಚೇರಿಯಿಲ್ಲ,ಗುಣಮಟ್ಟದ ಕುರ್ಚಿ ಟೇಬಲ್ , ಅಲ್ಮೇರಾ ,ಗುಣಮಟ್ಟದ ಲ್ಯಾಪ್ಟ್ಯಾಪ್, ಮೊಬೈಲ್ ಇಲ್ಲ ಎಂದು ಅಧಿಕಾರಿಗಳು ಅಲವತ್ತುಕೊಂಡರು.
ಈ ಕಾರಣದ ಹಿನ್ನೆಲೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಜೊತೆಗೆ ಬೆಳೆ ಸಮೀಕ್ಷೆ ವರದಿ ನೀಡಲು ತೋಟಗಾರಿಕೆ ಇಲಾಖೆಗೆ ಆದೇಶಿಸಬೇಕು, ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ಕೊಡಿ, ಇಲಾಖಾ ಸಿಬ್ಬಂದಿಗಳಿಗೆ ಒಂದು ತಿಂಗಳ ಹೆಚ್ಚುವರಿ ವೇತನ ನೀಡಬೇಕು . ಆಡಳಿತಾಧಿಕಾರಿಗಳು ಕರ್ತವ್ಯದ ವೇಳೆ ಪ್ರಾಣಹಾನಿ ಸಂಭವಿಸಿದರೆ 25 ಲಕ್ಷ ಪರಿಹಾರ ನೀಡಬೇಕು ಇಲ್ಲ ವಾದರೆ ಮುಂದಿನ ಹಂತದಲ್ಲಿ ಹೋರಾಟ ತೀವ್ರತೆ ಪಡೆಯುತ್ತದೆ ಎಂದು ಇತರೆ ಸೌಲಭ್ಯ ಈಡೇರಿಸುವಂತೆ ತಾ.ಘಟಕದ ಅಧ್ಯಕ್ಷರು ಪ್ರತಿಭಟನಾ ನಿರತ ಆಡಳಿತಾಧಿಕಾರಿ ರಂಜಿತ್ ಕುಮಾರ್ ಸರ್ಕಾರಕ್ಕೆ ಎಚ್ಚರಿಸಿದರು.
ಸದಾ ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಕಂದಾಯ ಅಧಿಕಾರಿಗಳ ಅಹವಾಲನ್ನು ಆಲಿಸಿ ಸೂಕ್ತ ಪರಿಹಾರ ಕಲ್ಪಿಸುವ ಮೂಲಕ ಅವರಿಗೆ ಭದ್ರತೆ ಕಲ್ಪಿಸಬೇಕಾಗಿದೆ ಎಂದು ತಹಶೀಲ್ದಾರ್ ವರದರಾಜು ಅವರಿಗೆ ಮವಿ ಸಲ್ಲಿಸಿದರು.
ಈ ವೇಳೆ ಆಡಳಿತಾಧಿಕಾರಿಗಳಾದ ರಾಮಲಿಂಗಪ್ಪ, ಕಿರಣ್ ಕುಮಾರ್,ರಾಜ್ ಗೋಪಾಲ್,ನಾರಾಯಣ್,ಅಮ್ಜಾದ್ ,ಹೆಚ್.ವಿ.ರವಿಕುಮಾರ್, ರಾಘವೇಂದ್ರ ರೆಡ್ಡಿ, ಮಧುಕುಮಾರ್ ,ಉಷಾ, ಇಮಾಮ್,ಮಹೇಶ್ , ರಾಜೇಶ್, ಈರಣ್ಣ,ಶ್ರೀನಿವಾಸ್ ಮೂರ್ತಿ, ಷಣ್ಮುಕರಾಧ್ಯ’ತಿಮ್ಮಾರೆಡ್ಡಿ,ಚಂದ್ರು,ಸಂಜಯ್,ಹಾಸಿಪ್ ಸೇರಿದಂತೆ ಇನ್ನೀತರರು ಪಾಲ್ಗೊಂಡಿದ್ದರು. ರೈತಸಂಘದ ಅಧ್ಯಕ್ಷರು ನಂರಸಿಂಹರೆಡ್ಡಿಯವರು ಮುಷ್ಕರಕ್ಕೆ ಬೆಂಬಲ ಸೂಚಿಸಿದರು.
ವರದಿ ಪಾವಗಡ.ಕೆ.ಮಾರುತಿ ಮುರಳಿ