ಶಿವಮೊಗ್ಗ : ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೆ.14 ರಿಂದ 17 ವರೆಗೆ ನಡೆದ ಕರ್ನಾಟಕ ಅಂತರ್‌ಜಿಲ್ಲಾ ಕಿರಿಯರ ಮತ್ತು 23ರ ವಯೋಮಿತಿಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಶಿವಮೊಗ್ಗದ ಕ್ರೀಡಾ ವಸತಿನಿಲಯದ ಕ್ರೀಡಾಪಟುಗಳು ವಿಜೇತರಾಗಿದ್ದಾರೆ.
23ರ ವಯೋಮಿತಿಯ ಅಥ್ಲೆಟಿಕ್‌ನಲ್ಲಿ ಸುದೀಪ್ ಎತ್ತರ ಜಿಗಿತದಲ್ಲಿ 2.05 ಮೀ ಜಿಗಿದು ನೂತನ ದಾಖಲೆ ದಾಖಲಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಕಿಡ್ಸ್ ಜಾವಲೀನ್ ಥ್ರೋನಲ್ಲಿ ಚಿರಾಗ್ ಎಂ.ಎಲ್ ಪ್ರಥಮ ಸ್ಥಾನ, 18 ವರ್ಷದ ವಯೋಮಿತಿಯ ಎತ್ತರ ಜಿಗಿತದಲ್ಲಿ ರೋಹಿತ್ ಕುಮಾರ್ ತೃತೀಯ ಸ್ಥಾನ, 16 ವರ್ಷದ ವಯೋಮಿತಿಯ ಎತ್ತರ ಜಿಗಿತದಲ್ಲಿ ಮಣಿಕಂಠ ಗೌಡ ತೃತೀಯ ಸ್ಥಾನ,ಕಿಡ್ಸ್ ಜಾವಲೀನ್ ಥ್ರೋನಲ್ಲಿ ಭಾನು ಪ್ರಕಾಶ್ ತೃತೀಯ ಸ್ಥಾನ, 16 ವರ್ಷದ ವಯೋಮಿತಿಯ ಎತ್ತರ ಜಿಗಿತದಲ್ಲಿ ಅನ್ವಿತಾ ಎಂ.ಆರ್. ದ್ವಿತೀಯ ಸ್ಥಾನ, ಗೌರಂಗಿ ಗೌಡ 100 ಮೀ ಹರ್ಡಲ್ಸ್ನಲ್ಲಿ ದ್ವಿತೀಯ ಮತ್ತು ಹಪ್ಪತ್‌ಲೈನ್‌ನಲ್ಲಿ ದ್ವಿತೀಯ ಸ್ಥಾನ, 18 ವರ್ಷದ ವಯೋಮಿತಿಯ ಎತ್ತರ ಜಿಗಿತದಲ್ಲಿ ಗೌತಮಿ ಗೌಡ ದ್ವಿತೀಯ ಸ್ಥಾನ ಪಡೆದು ವಿಜೇತರಾಗಿರುತ್ತಾರೆ.
ವಿಜೇತ ಕ್ರೀಡಾಪಟುಗಳಿಗೆ ತರಬೇತುದಾರ ಬಾಳಪ್ಪ ಮಾನೆ, ಯುವ ಸಬಲೀಕರಣ ಮತ್ತು ಕೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರೇಖ್ಯಾ ನಾಯ್ಕ್ ಮತ್ತು ಜಿಲ್ಲಾ ಅಥ್ಲೇಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಉದಯ್ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ ಎಂದು ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಶಿವಪ್ರಸಾದ್, ಶಿವಮೊಗ್ಗ