ಹೇಗೆ ಬದುಕಲಿ ನಾನು ಇನ್ನೊಬ್ಬರ ನೋಡಿ.
ಬೆಳಕಿನಲ್ಲಿ ಕಷ್ಟಗಳನ್ನು ನೋಡಿ.
ಇರುಳಿನಲ್ಲಿ ಸುಖವನ್ನು ಕಂಡು.
ಜೀವನ ಅಮಾವಾಸ್ಯೆ ಹುಣ್ಣಿಮೆಯದಂತೆ.!!1!!
ಪ್ರಕೃತಿಯು ಇರುವುದು ಹಾಗೆಯೇ
ಯಾರಿಗೋ ದ್ರೋಹ ಬಗೆದ ಹಾಗೆ.
ಆದರೆ ಮನುಷ್ಯ ಯಾಕೆ ಹೀಗೆ.
ಸುಖಕ್ಕಾಗಿ ಅಲಿಡಾಡ್ತಿರುವನು ಪದೇಪದೇ.!!2!!
ಸೂರ್ಯನ ಪ್ರಕಾಶಕ್ಕೆ ಜನರು ಬೆರಗಾಗುವರು.
ಚಂದ್ರನ ಇರುಳಿನ ರಾತ್ರಿಗೆ ತಲೆ ಕೆಡಿಸಿಕೊಳ್ಳದವರು.
ಇವರಿಬ್ಬರೂ ಬೇರೆ ಬೇರೆಯಾದರೂ .
ಇವರಿಬ್ಬರಿಗಿಲ್ಲದ ಚಿಂತೆ ನಮಗೆ ಯಾಕೆ!.!!3!!
-ಚಂದ್ರಶೇಖರಚಾರ್ M.ಶಿಕ್ಷಕರು,ವಿಶ್ವ ಮಾನವ ಪ್ರೌಢಶಾಲೆ.