ದಾವಣಗೆರೆ/ಹೊನ್ನಾಳಿ:
ಅಜೀಮ್ ಪ್ರೇಮ್ ಜಿ ಫೌಂಡೇಶನ್ ಅವರು ಭಾರತ ದೇಶದ ಮಕ್ಕಳು ಪೌಷ್ಟಿಕವಾಗಿ ಮತ್ತು ಸದೃಢವಾಗಿ ರೋಗನಿರೋಧಕ ಶಕ್ತಿಯನ್ನು ಪಡೆದು ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಪಣತೊಡುವಂತೆ ಸರ್ಕಾರಿ ಶಾಲೆಗಳಲ್ಲಿ ಇರುವ ಮಕ್ಕಳಿಗೆ ಉತ್ತಮವಾದ ಪೌಷ್ಟಿಕ ಆಹಾರ ದೊರಕಲೆಂದು ಹಣ್ಣು ಹಾಲು ಮೊಟ್ಟೆ ಹೀಗೆ ವಿಧ ವಿಧವಾದ ಪೌಷ್ಟಿಕ ಆಹಾರಗಳನ್ನು ನೀಡುವಲ್ಲಿ ಒಂದು ಮಹತ್ತರ ಹೆಜ್ಜೆಯನ್ನು ಇಟ್ಟಿರುವ ನಮ್ಮ ಅಜೀಮ್ ಪ್ರೇಮ್ ಜಿ ಅವರಿಗೆ ನಮ್ಮ ಸರ್ಕಾರಿ ಶಾಲೆ ಮಕ್ಕಳ ಪರವಾಗಿ ಒಂದು ಸಲಾಂ
ಎಷ್ಟೋ ಜನ ಹಣ ಇದ್ದರೂ ಇನ್ನೊಬ್ಬರಿಗೆ ಸಹಾಯ ಮಾಡಬೇಕೆಂಬ ಮನಸ್ಸು ಇರುವುದಿಲ್ಲ ಇರುವ ಅನುದಾನದಲ್ಲೇ ತಿಂದು ತೇಗುವ ಜನರಿರುವ ಈ ಕಾಲದಲ್ಲಿ ತಮ್ಮ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವಂತಹ ಇಂಥ ಕಾರ್ಯಗಳನ್ನು ಮತ್ತು ಸರ್ಕಾರಿ ಶಾಲೆಯನ್ನು ಉಳಿಸುವ ಕಾರ್ಯವನ್ನು ಮಾಡಲು ಮನಸ್ಸು ಮಾಡಬೇಕು ಹಾಗಿದ್ದರೆ ನಮ್ಮ ಸರ್ಕಾರಿ ಶಾಲೆ ಗಳು ಮುಚ್ಚುವ ಅಂತದಿಂದ ಹೊರಬರುತ್ತದೆ
ಅವಳಿ ತಾಲೂಕಿನ ಜನಪ್ರಿಯ ಶಾಸಕರಾದ ಡಿ ಜಿ ಶಾಂತನಗೌಡರು ಈ ದಿನ ಹೊನ್ನಾಳಿಯ ದೇವನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು (ಪ್ರೌಢಶಾಲಾ ವಿಭಾಗ) ನಡೆದ ಕರ್ನಾಟಕ ಸರ್ಕಾರ ಮತ್ತು ಅಜೀಂ ಪ್ರೇಮ್ ಜಿ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ “ಪೂರಕ ಪೌಷ್ಟಿಕ ಆಹಾರ ವಿತರಣಾ” ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಸರಕಾರದ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಮತ್ತು ಶಾಲೆಗೆ ಬರುವ ಮಕ್ಕಳ ಪೌಷ್ಟಿಕತೆಯನ್ನು ಕಾಪಾಡುವ ಉದ್ದೇಶದಿಂದ ಯೋಜಿಸಿರುವ ಸರ್ಕಾರದ ಈ ಯೋಜನೆ ಯೋಜನೆ ಸೂಕ್ತ ರೀತಿಯಲ್ಲಿ ನಡೆಯಬೇಕೆಂದು ತಾಲೂಕಿನ ಅಧಿಕಾರಿಗಳಿಗೆ ಸೂಚಿಸಿದರು.
ವರದಿ: ಪ್ರಭಾಕರ ಡಿ ಎಂ