ವಯಸ್ಸಾಗುತ್ತಿದೆ ಯುವಕ ಯುವತಿಯರಿಗೆ
ಇನ್ನೂ ಮದುವೆ ಕಂಕಣಕೂಡದು ಅವರಿಗೆ
ಎಷ್ಟು ಹುಡುಕಿದರೂ ಸಿಗರೂ ಜೋಡಿಗಳು ಇವರಿಗೆ
ಬ್ರೋಕರ್ಗೆ ಇಟ್ಟರು ಜಾತಕ ಫೋಟೋ ಜೊತೆ.!!೧!!
ಕನಸುಗಳ ಗೋಪುರ ಹೆಚ್ಚುತ್ತಿದೆ
ಚಿಂತೆ ಇವರಿಗೂ ಕಾಡುತ್ತಿದೆ
ಎತ್ತಣ ಮಾಮರ ಎತ್ತಣ ಕೋಗಿಲೆ ಅಂತಾಗಿದೆ
ಜೀವನವಿಡೀ ಹುಡುಕಿ ಹುಡುಕಿ ಸಾಕಾಗಿದೆ.!!೨!!
ಅದೃಷ್ಟ ಎಂಬುದು ಅವರವರ ಪಾಡು
ದೇವರಿಗೆ ಮೊರೆ ಇಟ್ಟರು ನೋಡು
ಗಿಡ ಮರಗಳನ್ನು ಸುತ್ತಿ ಸುತ್ತಿಹರು
ಕೊನೆಗೆ ಮ್ಯಾಟ್ರಿಮೋನಿಗೆ ಮಾರುಹೋದರು.!!೩!!
-ಚಂದ್ರಶೇಖರ ಚಾರ್ M,ಶಿಕ್ಷಕರು
ವಿಶ್ವಮಾನವ ಪ್ರೌಢಶಾಲೆ ,ಚಿತ್ರದುರ್ಗ